ಕಿನ್ನಿಗೋಳಿ : “ಬಾ ಬೆಳಕೆ” ಕೃತಿ ಬಿಡುಗಡೆ

ಕಿನ್ನಿಗೋಳಿ : ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 526ನೇ ಕೃತಿ ಸಿಸ್ಟರ್ ಮಾರಿ ಆಂಜ್ ಬಿ.ಎಸ್. ರಚಿತ “ಬಾ ಬೆಳಕೆ” ಕೃತಿಯನ್ನು ಜೂನ್ ತಾ.20ರಂದು ಬೆಳಿಗ್ಗೆ 9.30ಕ್ಕೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕರಾದ ಡಾ. ಜೀವಿತಾ ಬಿಡುಗಡೆಗೊಳಿಸಲಿರುವರು. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಲಿದ್ದಾರೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಅಂಚನ್, ಜೊಸ್ಸಿ ಪಿಂಟೊ ಕಿನ್ನಿಗೋಳಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಉಪಸ್ಥಿತರಿರುವರು ಎಂದು ಯುಗಪುರುಷ ಪ್ರಕಟಣಾಲಯದ ಪ್ರಕಾಶಕ ಕೆ. ಭುವನಾಭಿರಾಮ ಉಡುಪ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-18061802
ಪಾವಂಜೆ : ಜನಪದ ಕ್ರೀಡೋತ್ಸವ

ಕಿನ್ನಿಗೋಳಿ : ಕೇವಲ ಹಣದಿಂದ ಜೀವನ ಅಸಾಧ್ಯ. ಕೃಷಿಯಿಂದಲೇ ಮಾತ್ರ ನಾವು ಉಣ್ಣಬಹುದು ಬದುಕಬಹುದು. ಸುಖೀ ಸಮಾಜ ಕಾಣಬಹುದು. ತೋಟ ಗದ್ದೆಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿ ಬದುಕಿನ ಪ್ರೇರಣೆ ಹುಟ್ಟಿಸುವ...

Close