ಪಾವಂಜೆ : ಜನಪದ ಕ್ರೀಡೋತ್ಸವ

ಕಿನ್ನಿಗೋಳಿ : ಕೇವಲ ಹಣದಿಂದ ಜೀವನ ಅಸಾಧ್ಯ. ಕೃಷಿಯಿಂದಲೇ ಮಾತ್ರ ನಾವು ಉಣ್ಣಬಹುದು ಬದುಕಬಹುದು. ಸುಖೀ ಸಮಾಜ ಕಾಣಬಹುದು. ತೋಟ ಗದ್ದೆಗಳು ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿ ಬದುಕಿನ ಪ್ರೇರಣೆ ಹುಟ್ಟಿಸುವ ಪಾವಂಜೆಯ ಕೆಸರುಗದ್ದೆ ಅಥವಾ ತುಳು ಜನಪದೋತ್ಸವ ಎಲ್ಲರಿಗೂ ಮಾದರಿ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ನಡೆದ ಪಾವಂಜೆ ಕ್ರೀಡೋತ್ಸವದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಈ ಸಂದರ್ಭ ದ.ಕ. ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ಪಡುಪಣಂಬೂರು ಪಂಚಾಯಿತಿ ಮಾಜಿ ಅಧ್ಯಕ್ಷ ವಿನೋದ್ ಕುಮಾರ್ ಸಾಲ್ಯಾನ್, ಪಾವಂಜೆ ದೇವಳದ ಶಶೀಂದ್ರ ಕುಮಾರ್, ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಿಲ್ಪ ಕುಡ್ವಾ, ಶೋಭೇಂದ್ರ ಸಸಿಹಿತ್ಲು, ಅಶೋಕ್ ಹಳೆಯಂಗಡಿ, ವಿನೋದ್ ಕುಮಾರ್ ಕೊಳುವೈಲು, ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.
ಪಲಿತಾಂಶ
ಹಗ್ಗ ಜಗ್ಗಾಟ
ಪುರುಷರ ವಿಭಾಗ :
ಮೂಳೂರು ಕಾಪು ಬೀಚ್ ಫ್ರೆಂಡ್ಸ್ ಪ್ರಥಮ, ಕಲ್ಲಾಪು ಗಜಕೇಸರಿ ದ್ವಿತೀಯ
ಮಹಿಳೆಯರ ವಿಭಾಗ :
ಪಡುಕೆರೆ ಫ್ರೆಂಡ್ಸ್ ಪ್ರಥಮ, ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಳಿ ದ್ವಿತೀಯ

ಪಿರಮಿಡ್ ರಚಿಸಿ ಮಡಕೆ ಒಡೆಯುವುದು
ಓಂ ಕ್ರಿಕೆಟರ‍್ಸ್ ಪಾವಂಜೆ

ದಂಪತಿಗಳ ಕೆಸರುಗದ್ದೆ ಓಟ
ಶಿವರಾಜ್ ಸವಿತಾ ದಂಪತಿಗಳು ಪ್ರಥಮ, ಶ್ರೀನಾಥ್ ಜ್ಯೋತಿ ದಂಪತಿಗಳು ದ್ವಿತೀಯ

ತೆಂಗಿನ ಗರಿ ಹೆಣೆಯುವ ಸ್ಪರ್ಧೆಯಲ್ಲಿ ವಸಂತಿ ದೇವಾಡಿಗ, ವಿನುತಾ ವಿಜಯೇಂದ್ರ ಬಹುಮಾನ ಗಳಿಸಿದರು. ಕೆಸರುಗದ್ದೆ ಛಾಯಾಚಿತ್ರ ಸ್ಪರ್ಧೆಯಲ್ಲಿ ಗೋವಿಂದ ಜವಳಿ, ಮೋಹನ ಕೋಟ್ಯಾನ್, ನೀರು ಸಹಿತ ಕೊಡಪಾನ ಓಟದಲ್ಲಿ ಮಿತ್ರ ಲೈಟ್ ಹೌಸ್, ಭವ್ಯ ಕಟೀಲು, ಗಿರಿಜಾ ಸಂತೋಷ್ ವಿಜೇತರಾದರು. ಕೆಸರುಗದ್ದೆ ಓಟದಲ್ಲಿ ಪುರುಷರ ವಿಭಾಗದಲ್ಲಿ ಅಭಿಷೇಕ್ ಪಾವಂಜೆ, ಶಶಾಂಕ್ ದೇವಾಡಿಗ, ಮಹಿಳಾ ವಿಭಾಗದಲ್ಲಿ ಮಿತ್ರ ಲೈಟ್ ಹೌಸ್, ಪ್ರತಿಭಾ ಸಂದೀಪ್, ಯುವತಿಯರಲ್ಲಿ ಭವ್ಯ ಕಟೀಲು, ಪಲ್ಲವಿ ಕಾಪು, ಹಿರಿಯ ನಾಗರಿಕರಲ್ಲಿ ಸದಾಶಿವ ಆಚಾರಿ, ಜಗನ್ನಾಥ ಕರ್ಕೇರ, ವಸಂತಿ ದೇವಾಡಿಗ, ರಜನಿ ದುಗ್ಗಣ್ಣ ಬಹುಮಾನ ಪಡೆದರು.
ಹಿಮ್ಮುಖ ಓಟದಲ್ಲಿ ಪ್ರಮೋದ್ ಪಂಜ, ಶಶಾಂಕ್ ದೇವಾಡಿಗ, ಮಿತ್ರ ಲೈಟ್ ಹೌಸ್, ಜ್ಯೋತಿ ಪಾವಂಜೆ, ಪಲ್ಲವಿ ಕಾಪು, ಹರ್ಷಲತಾ ಮುಚ್ಚೂರು. ಜಾನಪದ ಸಮೂಹ ನೃತ್ಯದಲ್ಲಿ ಎಕ್ಸ್ ಟೀಂ ಡ್ಯಾನ್ಸ್ ಅಕಾಡಮಿ ಮುಲ್ಕಿ, ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ, ನಲಿಕೆ ತಂಡ ಪಣಂಬೂರು ಬಹುಮಾನ ವಿಜೇತರಾದರು.

Kinnigoli-18061802

Comments

comments

Comments are closed.

Read previous post:
Kinnigoli-18061801
ಕೊಳುವೈಲು ಅನಂತಪದ್ಮನಾಭ ರಾವ್

ಕಿನ್ನಿಗೋಳಿ : ಹಳೆಯಂಗಡಿ ಉದ್ಯಮಿ, ಮಾರುತಿ ರೈಸ್ ಮಿಲ್ ಹಾಗೂ ಆಯಿಲ್ ಸಂಸ್ಥೆಯ ಕೊಳುವೈಲು ಪದ್ಮನಾಭ ರಾವ್ (83ವರ್ಷ) ಭಾನುವಾರ ನಿಧನರಾದರು. ಪಾವಂಜೆ ಮಹಾಲಿಂಗೇಶ್ವರ ದೇವಳದ ಟ್ರಸ್ಟಿ, ಗಣೇಶೋತ್ಸವ ಸಮಿತಿ,...

Close