ಹಳೆಯಂಗಡಿ : ಕಟ್ಟಡ ಕಾಮಗಾರಿ ವೀಕ್ಷಣೆ

ಕಿನ್ನಿಗೋಳಿ : ಹಳೆಯಂಗಡಿ ಸರಕಾರಿ ಕಾಲೇಜು ಶಿಕ್ಷಣದಲ್ಲಿ ಸಾಕಷ್ಟು ಹೆಸರು ಮಾಡಿ ಮಾದರಿಯಾಗಿದೆ. ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಬೇಕು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೊಟ್ಯಾನ್ ಹೇಳಿದರು.
ಹಳೆಯಂಗಡಿ ಸರಕಾರಿ ಪದವಿ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು ಕಾಲೇಜು ಮುಚ್ಚುವ ಸ್ಥಿತಿಯಲ್ಲಿದ್ದ ಸಂದರ್ಭ ಶ್ರಮ ವಹಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಿ ನಿಕಟ ಪೂರ್ವ ಕಾಲೇಜು ಪ್ರಿನ್ಸಿಪಾಲ್ ವಿಶ್ವನಾಥ ಭಟ್ ಕಾಲೇಜಿನ ಅಭಿವೃದ್ದಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದ್ದು ಮಕ್ಕಳು ಹಾದಿ ತಪ್ಪದಂತೆ ಶಿಕ್ಷಕರು ಎಚ್ಚರಿಕೆ ವಹಿಸಿಬೇಕು ಎಂದರು.
ಈ ಸಂದರ್ಭ ನಿರ್ಮಾಣ ಹಂತದಲ್ಲಿರುವ ಕಾಲೇಜು ಕಟ್ಟಡವನ್ನು ವೀಕ್ಷಿಸಿದರು. ಕಾಲೇಜು ಪ್ರಿನ್ಸಿಪಾಲ್ ಡಾ.ಪಿ.ಬಿ.ಪ್ರಸನ್ನ , ನಿಕಟಪೂರ್ವ ಪ್ರಿನ್ಸಿಪಾಲ್ ವಿಶ್ವನಾಥ ಭಟ್ ಮತ್ತು ಕಾಲೇಜು ಉಪಾನ್ಯಾಸರ ಜೊತೆ ಕಾಲೇಜಿನ ಕಾರ್ಯ ವೈಕರಿ ಬಗ್ಗೆ ಚರ್ಚಿಸಿದರು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು,, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಪಡುಪಣಂಬೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ಚಿತ್ರಾ ಸುಕೇಶ್, ರಾಮಚಂದ್ರ ಶಣೈ, ಹಿಮಕರ್ ಕದಿಕೆ, ಮನೋಜ್ ಹಳೆಯಂಗಡಿ, ರಮೇಶ್ ಅಂಚನ್, ದಿನೇಶ್ ಹರಿಪಾದೆ, ಶಂಕರ್ ಇಂದಿರಾನಗರ, ಸುಕೇಶ್ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-20061803

Comments

comments

Comments are closed.

Read previous post:
Kinnigoli-19061802
ಸಾಧನೆಗೆ ಪ್ರಯತ್ನ ಅನಿವಾರ್ಯ

ಕಿನ್ನಿಗೋಳಿ : ಒಬ್ಬ ವ್ಯಕ್ತಿ ಸಾಧನೆ ಮಾಡಬೇಕೆಂದಾದರೆ ಅದಕ್ಕೆ ಪ್ರಯತ್ನ ಅನಿವಾರ್ಯ ಎಂದು ಪೊಂಪೈ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ವಿಕ್ಟರ ಡಿಮೆಲ್ಲೊ ಹೇಳಿದರು. ತಾಳಿಪಾಡಿ ಐಕಳದ ಪೊಂಪೈ...

Close