ಸಾಧನೆಗೆ ಪ್ರಯತ್ನ ಅನಿವಾರ್ಯ

ಕಿನ್ನಿಗೋಳಿ : ಒಬ್ಬ ವ್ಯಕ್ತಿ ಸಾಧನೆ ಮಾಡಬೇಕೆಂದಾದರೆ ಅದಕ್ಕೆ ಪ್ರಯತ್ನ ಅನಿವಾರ್ಯ ಎಂದು ಪೊಂಪೈ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ವಿಕ್ಟರ ಡಿಮೆಲ್ಲೊ ಹೇಳಿದರು.
ತಾಳಿಪಾಡಿ ಐಕಳದ ಪೊಂಪೈ ಪದವಿ ಪೂರ್ವ ಕಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ನಾಯಕ ಆಗುವವನಿಗೆ ತಾಳ್ಮೆಯ ಜೊತೆಗೆ ಧೈರ್ಯ, ಅಹಂಕಾರವಿಲ್ಲದ ಆತ್ಮವಿಶ್ವಾಸವಿರಬೇಕು, ಎಂದಿಗೂ ಸರ್ವಾಧಿಕಾರಿಯಾಗಿ ವರ್ತಿಸಬಾರದು ಎಂದರು.
ಪಾಲಡ್ಕ ಚರ್ಚ್ ಧರ್ಮಗುರು ಫಾ. ಐವನ್ ರೊಡ್ರಿಗಸ್ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿ ಜೀವನದಲ್ಲಿ ಮಾತಿಗಿಂತ ಕೃತಿಗೆ ಆದ್ಯತೆ ನೀಡಬೇಕು, ಮಾನವ ಧರ್ಮವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಶ್ರೀ ಎನ್. ಎಂ ಮ್ಯಾಥ್ಯೂ ಸ್ವಾಗತಿಸಿ ನೂತನವಾಗಿ ವಿದ್ಯಾರ್ಥಿ ನಾಯಕರುಗಳಾಗಿ ಆಯ್ಕೆಯಾದ ಸಿಯಾನಾ ಪಾಯಸ್, ಶೋನ್ ಪಿಂಟೊ, ಅನಿಕೇತ್ ಹಾಗೂ ಇನ್ನಿತರ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಪೊಂಪೈ ಪದವಿಪೂರ್ವ ಕಾಲೇಜು ದೈಹಿಕ ನಿರ್ದೇಶಕ ಮತ್ತು ವಿದ್ಯಾರ್ಥಿ ಸಂಘದ ಸಂಚಾಲಕ ಆಲ್ವಿನ್ ಮಿರಾಂದ ಉಪಸ್ಥಿತರಿದ್ದರು.
ಉಪನ್ಯಾಸಕ ಲಕ್ಷ್ಮೀಶ್ ಹೆಗಡೆ ಸೋಂದಾ ವಂದಿಸಿದರು. ಸಾಂಸ್ಕ್ರತಿಕ ಸಂಘದ ಸಂಚಾಲಕಿ ಉಪನ್ಯಾಸಕಿ ಜ್ಯೋತಿ ಬೆನಿಟಾ ರೊಸಾರಿಯೊ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Kinnigoli-19061802

Comments

comments

Comments are closed.

Read previous post:
Kinnigoli-19061801
ಮಲ್ಲಿಗೆಯಂಗಡಿ : ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಿನ್ನಿಗೋಳಿ : ನಂದಿನಿ ಯುವಕ ಮಂಡಳ ಮಲ್ಲಿಗೆಯಂಗಡಿ ಆಶ್ರಯದಲ್ಲಿ ಪರಿಸರದ ಮಕ್ಕಳಿಗೆ ಪುಸ್ತಕಗಳನ್ನು ಇತ್ತೀಚೆಗೆ ಸುಮಾರು ೨೦ ಸಾವಿರ ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು. ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ...

Close