ಕಿನ್ನಿಗೋಳಿ : “ಬಾ ಬೆಳಕೆ” ಕೃತಿ ಬಿಡುಗಡೆ

ಕಿನ್ನಿಗೋಳಿ: ಸಾಹಿತ್ಯ ಕೃತಿಗಳು ಜನರಿಗೆ ಸಲಹೆ, ಮಾನಸಿಕ ಶಾಂತಿ ನೆಮ್ಮದಿ ಹಾಗೂ ಜೀವನ ಸುಧಾರಿಸುವ ಕೆಲಸ ಮಾಡಬೇಕು ಎಂದು ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಭಗಿನಿ ಡಾ. ಜೀವಿತಾ ಹೇಳಿದರು.
ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 526ನೇ ಕೃತಿ ಸಿಸ್ಟರ್ ಮಾರಿ ಆಂಜ್ ಬಿ.ಎಸ್. ರಚಿತ “ಬಾ ಬೆಳಕೆ” ಕೃತಿಯನ್ನು ಬುಧವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಅಂಚನ್, ಸಾಹಿತಿ ಕವಿ ಜೊಸ್ಸಿ ಪಿಂಟೊ ಕಿನ್ನಿಗೋಳಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಹಿರಿಯ ಸಾಹಿತಿ ಉಮೇಶ್ ರಾವ್ ಎಕ್ಕಾರು, ಭಗಿನಿ ಅಮಿತಾ, ಐಕಳ ಹರೀಶ್ ಶೆಟ್ಟಿ, ರಾಮಣ್ಣ ಕುಲಾಲ್ ಉಪಸ್ಥಿತರಿದ್ದರು.
ಯುಗಪುರುಷ ಪ್ರಕಟಣಾಲಯದ ಪ್ರಕಾಶಕ ಕೆ. ಭುವನಾಭಿರಾಮ ಉಡುಪ ಕಾರ್ಯಕ್ರಮ ನಿರೂಪಿಸಿದರು.

Kinnigoli-21061801

Comments

comments

Comments are closed.

Read previous post:
ಜೂ.24 : ಕೆಮ್ಮಡೆ ಮಿಶನ್ ಕಾರ್ಯಕ್ರಮ

ಕಿನ್ನಿಗೋಳಿ: ಸಿ. ಎಚ್. ಗ್ರೂಪ್ ಹಾಗೂ ನ್ಯಾಷನಲ್ ಹೆಲ್ತ್ ಮಿಶನ್, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ ಜಿಲ್ಲಾ ಹೆಲ್ತ್ ಮತ್ತು ಫ್ಯಾಮಿಲಿ ವೆಲ್‌ಫೆರ್ ಇದರ ವತಿಯಿಂದ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ,...

Close