ಪರಂಪರೆ ಉಳಿಸಲು ತುಳು ನಾಟಕಗಳು ಪೂರಕ

ಕಿನ್ನಿಗೋಳಿ: ನಮ್ಮ ನಾಡಿನ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಲು ತುಳು ನಾಟಕಗಳು ಪೂರಕವಾಗಿದೆ. ಸಮಾಜಕ್ಕೆ ಸಂದೇಶಭರಿತ ನಾಟಕಗಳು ನಿರಂತರ ಪ್ರದರ್ಶನಗೊಳ್ಳಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಶನಿವಾರ ಕಿನ್ನಿಗೋಳಿ ಯುಗಪುರುಷದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿದಾನದಲ್ಲಿ 20ನೆಯ ವರ್ಷಾಚರಣೆಯಲ್ಲಿರುವ ವಿಜಯಾ ಕಲಾವಿದರ ಪ್ರಥಮ ನಾಟಕ ಹರೀಶ್ ಪಡುಬಿದ್ರೆ ಅವರ ರಚನೆಯ ಕಡೀರ ಮಗೆ ಹಾಗೂ ತ್ರಿಶತಕ ಪ್ರದರ್ಶಗೊಂಡಿದ್ದ ಬೈರಾಸ್ ಭಾಸ್ಕರೆ ತುಳು ನಾಟಕಗಳ ಮರು ಪ್ರದರ್ಶನದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಉದ್ಯಮಿ ಪ್ರಥ್ವೀರಾಜ್ ಆಚಾರ್ಯ, ಏಳಿಂಜೆ ಕೃಷ್ಣ ಶೆಟ್ಟಿ, ವಿಜಯಾ ಕಲಾವಿದರ ಅಧ್ಯಕ್ಷ ಶರತ್ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ ಏಳಿಂಜೆ, ನಿರ್ವಾಹಕ ಸುಧಾಕರ ಸಾಲ್ಯಾನ್ ಸಂಕಲಕರಿಯ, ನಾಟಕ ರಚನೆಕಾರ ಹರೀಶ್ ಪಡುಬಿದ್ರೆ, ಕಲಾವಿದರಾದ ರಾಜೇಶ್ ಕೆಂಚನಕೆರೆ, ಸೀತಾರಾಮ ಶೆಟ್ಟಿ ಎಳತ್ತೂರು, ನರೇಂದ್ರ ಕೆರೆಕಾಡು, ಭಗವಾನ್ ಸುರತ್ಕಲ್, ಸತೀಶ್ ಶಿರ್ವ, ಚಿತ್ರಲೇಖಾ ಭಗವಾನ್, ಉದಯ ಕುಮಾರ್ ಹಳೆಯಂಗಡಿ, ನಿತೇಶ್ ಕಾಂತಾವರ, ಹರಿಪ್ರಸಾದ್ ನಂದಳಿಕೆ, ರಕ್ಷಿತಾ ಕುಲಾಲ್, ಸುಶ್ಮಿತಾ ಏಳಿಂಜೆ, ಧ್ವನಿ ಬೆಳಕು ಸಂಯೋಜನೆಯ ಪ್ರದೀಪ್ ನಂದಳಿಕೆ, ಅಕ್ಷಿತ್ ಏಳಿಂಜೆ ಮತ್ತಿತರರು ಉಪಸ್ಥಿತರಿದ್ದರು.

ಕಡೀರ ಮಗೆ ನಾಟಕದಲ್ಲೇನಿದೆ..?
ಕಡೀರ ಮಗೆ ನಾಟಕ ಒಂದು ಕಾಲದಲ್ಲಿ ಮುಂಬಯಿಯ ಮಾಯಾನಗರವನ್ನು ಉದ್ಯೋಗ ಸಹಿತ ಬೇರೆ ಬೇರೆ ವಿಧದದಲ್ಲಿ ಯುವಕರು ಆಕರ್ಷಣೆಗೊಳಗಾದ ಕಥಾ ಹಂದರವನ್ನು ಹಾಸ್ಯದ ಜೊತೆಗೆ ಗ್ರಾಮೀಣ ಭಾಗದ ಪ್ರೇಮಕಥೆಯನ್ನು ಹೊಂದಿದೆ. ಇದರಲ್ಲಿ ಹಾಸ್ಯವನ್ನು ವಿಭಿನ್ನವಾಗಿ ತೋರಿಸಲಾಗಿದ್ದು ಇಪ್ಪತ್ತು ವರ್ಷದ ಹಿಂದೆ ಈ ನಾಟಕ ಅನೇಕ ಸಂಘ ಸಂಸ್ಥೆಗಳ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ಕಂಡಿತ್ತಲ್ಲದೇ ಹವ್ಯಾಸಿ ಕಲಾವಿದರು ತಮ್ಮ ತಂಡದಲ್ಲಿ ನಾಟಕವನ್ನು ಪ್ರದರ್ಶಿಸಿ ಯಶಸ್ಸು ಕಂಡಿದ್ದರು. ಈ ನಾಟಕ ವಿಜಯಾ ಕಲಾವಿದರಿಂದ ೭೭ಪ್ರದರ್ಶನ ಕಂಡಿದೆ.
ಬೈರಾಸ್ ಭಾಸ್ಕರೆ..
ಹರೀಶ್ ಪಡುಬಿದ್ರೆಯವರ ಈ ತುಳು ನಾಟಕ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿ ವಿಜಯಾ ಕಲಾವಿದರಿಂದ 309 ಪ್ರದರ್ಶನ ಕಂಡಿತ್ತು. ಶೋಷಿತ ವ್ಯಕ್ತಿ ಭಾಸ್ಕರನ ಬದುಕಿನ ಚಿತ್ರಣದ ಜತೆ ನಕ್ಕು ನಗಿಸುವ ಹಾಸ್ಯ ಸನ್ನಿವೇಶಗಳಿಂದ ಕಲಾಭಿಮಾನಿಗಳ ಮನ ಸೂರೆಗೊಂಡಿತ್ತು.

Kinnigoli-21061802

Comments

comments

Comments are closed.

Read previous post:
Kinnigoli-21061801
ಕಿನ್ನಿಗೋಳಿ : “ಬಾ ಬೆಳಕೆ” ಕೃತಿ ಬಿಡುಗಡೆ

ಕಿನ್ನಿಗೋಳಿ: ಸಾಹಿತ್ಯ ಕೃತಿಗಳು ಜನರಿಗೆ ಸಲಹೆ, ಮಾನಸಿಕ ಶಾಂತಿ ನೆಮ್ಮದಿ ಹಾಗೂ ಜೀವನ ಸುಧಾರಿಸುವ ಕೆಲಸ ಮಾಡಬೇಕು ಎಂದು ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಭಗಿನಿ ಡಾ. ಜೀವಿತಾ ಹೇಳಿದರು....

Close