ಕಟೀಲಿನಲ್ಲಿ ಕುದ್ರೋಳಿ ಗಣೇಶ್ ಸ್ವಚ್ಚತೆ ಜಾದು

ಕಿನ್ನಿಗೋಳಿ: ಸ್ವಚ್ಚ ಭಾರತ ಕಲ್ಪನೆ ಎಂಬುದು ಮಕ್ಕಳಿಂದಲೇ ಪ್ರಾರಂಭವಾಗಬೇಕು ಅದಕ್ಕಾಗಿ ಸ್ವಚ್ಚತೆಗಾಗಿ ಜಾದು ಎನ್ನುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಜಿಲ್ಲೆಯಾದಂತ್ಯ ಬೇರೆ ಬೇರೆ ಶಾಲೆಗಳಲ್ಲಿ 100 ಪ್ರಯೋಗಗಳನ್ನು ಹಮ್ಮಿಕೊಂಡಿದ್ದೇವೆ ಎಂದು ರಾಮಕೃಷ್ಣ ಆಶ್ರಮದ ರಂಜನ್ ಹೇಳಿದರು
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಗುರುವಾರ ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಪ್ರಸ್ತುತಪಡಿಸಿದ ಮೆಗಾ ಸ್ಟಾರ್ ಕುದ್ರೋಳಿ ಗಣೇಶ್ ಅವರಿಂದ ಸ್ವಚ್ಚತೆಗಾಗಿ ಜಾದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಹರಿನಾರಾಯಣ ಆಸ್ರಣ್ಣ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟರೆ ನಮಗೆಯೇ ಲಾಭ, ಇದರಿಂದ ರೋಗ ರುಜಿನಗಳಿಂದ ದೂರವಾಗಿರಬಹುದು, ಅಲ್ಲದೆ ರೋಗವೇ ಇಲ್ಲದ ಜಾದೂ ಆಗಬಹುದು ಎಂದರು.
ಈ ಸಂದರ್ಭ ಖಾಲಿ ಪ್ರೇಮ್ ನಿಂದ ವಿವೇಕಾನಂದರ ಭಾವ ಚಿತ್ರ, ಮತ್ತು ಖಾಲಿ ಡಬ್ಬದಿಂದ ಮಾಲೆಯನ್ನು ಸೃಷ್ಟಿಸಿ ವಿವೇಕಾನಂದ ಭಾವಚಿತ್ರಕ್ಕೆ ಮಾಲೆಯನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕುದ್ರೋಳಿ ಗಣೇಶ್ ಸ್ವಚ್ಚ ಪರಿಸರಕ್ಕೆ ಸಂಬಂಧಿಸಿ ವಿವಿಧ ಜಾದುಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸ್ವಚ್ಚ ಭಾರತ ನಿರ್ಮಿಸುತ್ತೇವೆ ಎಂದು ಪ್ರತಿಜ್ಞೆಯನ್ನು ಮಾಡಿದರು.
ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಪ್ರೌಢಶಾಲಾ ವಿಭಾಗದ ಉಪಪ್ರಾಶುಂಪಾಲ ಸೋಮಪ್ಪ ಅಲಂಗಾರ್, ಶಿಕ್ಷಕ ಸಾಯಿನಾಥ ಶೆಟ್ಟಿ, ಸಂತೋಷ್ ಆಳ್ವ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷೀ ಮತ್ತಿತರರು ಇದ್ದರು.

ಮಕ್ಕಳಿಗೆ ಜಾದೂ ಎಂದರೆ ಇಷ್ಟ. ಈ ವಯಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಕಲಿಸಿದರೆ ಅದು ಮುಂದುವರಿಯಲು ಸಾಧ್ಯ. ಜಾದೂ ಮೂಲಕ ಸ್ವಚ್ಚ ಭಾರತದ ಕಲ್ಪನೆಯನ್ನು ಮಕ್ಕಳ ಮನಸ್ಸಿಗೆ ಬಿತ್ತುತ್ತಿದ್ದೇವೆ. ಇದರಿಂದ ಸ್ವಚ್ಚ ಭಾರತ ಮಾಡಲು ಸಾಧ್ಯ. ಸ್ವಚ್ಚತೆ ನಮ್ಮಿಂದಲೇ ಪ್ರಾರಂಭವಾಗಬೇಕು.
ಕುದ್ರೋಳಿ ಗಣೇಶ್. ಜಾದುಗಾರ

Kinnigoli-230602

Comments

comments

Comments are closed.

Read previous post:
Kinnigoli-230601
ತೋಕೂರು ಐಟಿಐ : ಯೋಗ ಶಿಬಿರ

ಕಿನ್ನಿಗೋಳಿ: ಯೋಗ ದೈಹಿಕ ವ್ಯಾಯಾಮಕ್ಕೆ ಜೀವನ ವಿಧಾನ, ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಸಮನ್ವಯ ಸಾಧಿಸುತ್ತದೆ ಎಂದು ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್...

Close