ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಭಿವೃದ್ದಿ ನನ್ನ ಧ್ಯೇಯ

ಕಿನ್ನಿಗೋಳಿ; ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿ ನನ್ನಧ್ಯೇಯ. ಸಾರ್ವಜನಿಕರ ಕಾರ್ಯಕರ್ತರ ಕುಂದುಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮೂಲ್ಕಿ ಹಾಗೂ ಮೂಡಬಿದಿರೆ ಯಲ್ಲಿ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದಲ್ಲಿ ಕಾರ್ಯಕರ್ತರು, ರಾಮಭಜನಾ ಮಂಡಳಿ ಹಾಗೂ ಶಿಮಂತೂರು ಯುವಕ ಮಂಡಲದ ಆಶ್ರಯದಲ್ಲಿ ಬುಧವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ Pತ್ರದಲ್ಲಿ ಹಲವಾರು ಸಮಸ್ಯೆಗಳಿವೆ ಅದನ್ನು ಸಾರ್ವಜನಿಕರು ಹಾಗೂ ಕಾರ್ಯಕರ್ತರು ತಿಳಿಸಬೇಕು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರ ಜೊತೆಗೂಡಿ ಅಭಿವೃದ್ಧಿ ಕೆಲಸ ಮಾಡಲಾಗುವುದು, ನಾನು ಶಾಸಕ ಎಂಬ ಅಂಜಿಕೆ ಬೇಡ ಹಿಂದೆ ಹೇಗೆ ನನ್ನಲ್ಲಿ ಸ್ನೇಹದಿಂದ ಇದ್ದಿರೋ ಅದೇ ರೀತಿ ಬಂದು ಮಾತನಾಡಿ ಎಂದು ಹೇಳಿದರು.
ಬಿಜೆಪಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ. ಪಂ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ಶರತ್ ಕುಬೆವೂರು, ಪುನರೂರು ಪ್ರತಿಷ್ಠಾನದ ದೇವಪ್ರಸಾದ್ ಪುನರೂರು, ನಗರ ಪಂಚಾಯಿತಿ ಸದಸ್ಯ ಪುರುಷೋತ್ತಮ್, ಉದ್ಯಮಿ ಸ್ಟೇನಿ ಪಿಂಟೋ ಕಟೀಲು, ನವೀನ್ ಬಪ್ಪನಾಡು, ಮಹಿಳಾ ಮಂಡಲ ಅಧ್ಯಕ್ಷೆ ಸುನೀತಾ ಶೆಟ್ಟಿ, ಉಮೇಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.
ರಾಮಭಜನಾ ಮಂಡಳಿಯ ಅಧ್ಯಕ್ಷ ಜೀವನ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-230604

Comments

comments

Comments are closed.

Read previous post:
Kinnigoli-230603
ಕಿನ್ನಿಗೋಳಿ : ಯೋಗ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಅನುಗ್ರಹ ಅನುಗೃಹದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಯೋಗದ ಮಹತ್ವದ ಬಗ್ಗೆ ಮೋಹನ್ ಕುಂಬ್ಳೆಕರ್ ಉಪನ್ಯಾಸ ನೀಡಿದರು. ಈ ಸಂದರ್ಭ ಧೃತಿ ಕುಲಾಲ್, ಪ್ರೀತಿ, ಅವನಿ,...

Close