ತೋಕೂರು ಐಟಿಐ : ಯೋಗ ಶಿಬಿರ

ಕಿನ್ನಿಗೋಳಿ: ಯೋಗ ದೈಹಿಕ ವ್ಯಾಯಾಮಕ್ಕೆ ಜೀವನ ವಿಧಾನ, ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಸಮನ್ವಯ ಸಾಧಿಸುತ್ತದೆ ಎಂದು ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಹೇಳಿದರು.
ನಿಟ್ಟೆ ವಿದ್ಯಾ ಸಂಸ್ಥೆ, ಮಂಗಳೂರು ಇದರ ಅಂಗ ಸಂಸ್ಥೆಯಾದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ, ಎನ್.ಎಸ್. ಎಸ್. ಘಟಕ , ಎನ್‌ಇಟಿ ರೋವರ್ಸ್ ಘಟಕ ಮತ್ತು ಪತಂಜಲಿ ಯೋಗ ಸಮಿತಿ, ದ.ಕ. ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ವಿಶ್ವಯೋಗ ದಿನಾಚರಣೆ ಮತ್ತು 10 ದಿನಗಳ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಯೋಗ ಗುರು ರಾಘವೇಂದ್ರ ರಾವ್ ಅವರನ್ನು ಗೌರವಿಸಲಾಯಿತು.
ಯೋಗೋಪಾಸನ ಕೆಂಚನಕೆರೆಯ ಯೋಗ ಶಿಕ್ಷಕರಾದ ಜಯ ಮುದ್ದು ಶೆಟ್ಟಿ ಮಾತಾನಾಡಿ ವಿಶ್ವಸಂಸ್ಥೆಯು ಪ್ರತಿವರ್ಷ ಜೂನ್ ೨೧ರ ದಿನಾಂಕವನ್ನು ಆಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವುದಾಗಿ ಘೋಷಣೆ ಮಾಡಿದ್ದು, ಭಾರತೀಯರಿಗಂತೂ ಯೋಗವಿದ್ಯೆ ಈ ರೀತಿಯಾಗಿ ಜಾಗತಿಕ ಮಾನ್ಯತೆ, ಗೌರವ ಗಳಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
ಸಂಸ್ಥೆಯ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ , ಕಛೇರಿ ಅಧೀಕ್ಷಕ ಉದಯ ಕುಮಾರ್ ಉಪಸ್ಥಿತರಿದ್ದರು.
ಹರೀಶ್ಚಂದ್ರ ಪ್ರಾರ್ಥನೆಗೈದರು. ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್ ಸ್ವಾಗತಿಸಿದರು. ವಿಶ್ವನಾಥ್ ರಾವ್ ಪ್ರಸ್ತಾವನೆಗೈದರು. ಸುರೇಶ್ ಎಸ್. ವಂದಿಸಿದರು. ಹರಿ ಹೆಚ್ ಕಾರ್ಯಕ್ರಮ ನಿರೂಪಿಸಿದರು.

Kinnigoli-230601

Comments

comments

Comments are closed.

Read previous post:
Kinnigoli-21061803
ಕಿನ್ನಿಗೋಳಿ ವಿಜಯಾ ಕಲಾವಿದರ ವಿಂಶತಿ ಆಚರಣೆ

ಕಿನ್ನಿಗೋಳಿ: ತುಳು ರಂಗಭೂಮಿಯಲ್ಲಿ ಕಳೆದ 20 ವರ್ಷಗಳಿಂದ ತುಳು ನಾಟಕ ಪ್ರದರ್ಶನಗಳ ಜೊತೆ ಕಲಾಸೇವೆ ನಡೆಸಿ ತುಳು ಬಾಷೆ, ಸಂಸ್ಕೃತಿಯ ಉಳಿವಿನ ಬಗ್ಗೆ ಶ್ರಮಿಸುತ್ತಿರುವ ಕಿನ್ನಿಗೋಳಿಯ ವಿಜಯಾ ಕಲಾವಿದರ ವಿಂಶತಿ...

Close