ಕುದ್ರೋಳಿ ಗಣೇಶ್ ಸ್ವಚ್ಚತೆಗಾಗಿ ಜಾದು

ಕಿನ್ನಿಗೋಳಿ: ವಿದ್ಯಾರ್ಥಿ ಸ್ವಚ್ಚ ಭಾರತದ ಕಲ್ಪನೆಯ ರೂವಾರಿಗಳಾಗಬೇಕು ಎಂದು ಶಾಲಾ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಹೇಳಿದರು
ಶನಿವಾರ ಐಕಳ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಮಕೃಷ್ಣ ಮಿಷನ್ ಹಾಗೂ ಎಮ್‌ಆರ್‌ಪಿಎಲ್ ಸಹಯೋಗದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಚ್ಚ ಮಂಗಳೂರು ಪ್ರಸ್ತುತಪಡಿಸಿದ ಮೆಗಾ ಸ್ಟಾರ್ ಕುದ್ರೋಳಿ ಗಣೇಶ್ ಮಾತನಾಡಿ ಸ್ವಚ್ಚತೆ ಎಂಬುದು ಮಕ್ಕಳಿಂದಲೇ ಪ್ರಾರಂಭವಾಗಬೇಕು ಅದಕ್ಕಾಗಿ ಸ್ವಚ್ಚತೆಗಾಗಿ ಜಾದು ಎನ್ನುವ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಜಿಲ್ಲೆಯಾದಂತ್ಯ ಬೇರೆ ಬೇರೆ ಶಾಲೆಗಳಲ್ಲಿ 100 ಪ್ರಯೋಗಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಪ.ಪೂ. ಕಾಲೇಜು ಪ್ರಿನ್ಸಿಪಾಲ್ ಎನ್. ಎಂ. ಮಾಥ್ಯೂ ಮಾತನಾಡಿ ಪರಿಸರವನ್ನು ಸ್ವಚ್ಚವಾಗಿಟ್ಟರೆ ನಮಗೆಯೇ ಲಾಭ, ಇದರಿಂದ ರೋಗ ರುಜಿನಗಳಿಂದ ದೂರವಾಗಿರಬಹುದು ಎಂದರು.
ಈ ಸಂದರ್ಭ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಮಾಲೆಯನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕುದ್ರೋಳಿ ಗಣೇಶ್ ಸ್ವಚ್ಚ ಪರಿಸರಕ್ಕೆ ಸಂಬಂಧಿಸಿ ವಿವಿಧ ಜಾದುಗಳನ್ನು ಮಾಡಿ ತೋರಿಸಿದರು.
ಲಕ್ಷ್ಮೀಶ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23061802

Comments

comments

Comments are closed.

Read previous post:
Kinnigoli-23061801
ಕರ್ನಿರೆ: ಉಚಿತ ನೋಟ್ ಪುಸ್ತಕ ವಿತರಣೆ

ಕಿನ್ನಿಗೋಳಿ: ಮುಂಬೈ ಉದ್ಯಮಿ ವಿಶ್ವನಾಥ ಶೆಟ್ಟಿ ಅವರು ಕಳೆದ 23 ವರ್ಷಗಳಿಂದ ಕರ್ನಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹಾಗೂ ಅಂಗನವಾಡಿಯ ಮಕ್ಕಳಿಗೆ ಉಚಿತ ನೋಟ್...

Close