ಸಾರ್ವಜನಿಕ ಕುಂದುಕೊರತೆಗಳಿಗೆ ಸ್ಪಂದಿಸುತ್ತೇನೆ

ಕಿನ್ನಿಗೋಳಿ: ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಭಿವೃದ್ಧಿಯ ನಿಟ್ಟನಲ್ಲಿ ಸಾರ್ವಜನಿಕ ಕುಂದುಕೊರತೆಗಳಿಗೆ ಸ್ಪಂದನೆಗೆ ಮೂಲ್ಕಿ ಹಾಗೂ ಮೂಡಬಿದಿರೆಯಲ್ಲಿ ಜನಸಂಪರ್ಕ ಸಭೆ ಆಯೋಜನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿ ಮೂರು ತಿಂಗಳಗೊಮ್ಮೆ ಅಧಿಕಾರಿ ಹಾಗೂ ಜನಸಂಪರ್ಕ ಸಭೆ ನಡೆಸಿ ಸರಕಾರದ ವಿವಿಧ ಯೋಜನೆಯ ಅರ್ಜಿ ವಿಲಾವೇರಿ ಮಾಡಲಾಗುವುದು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.
ಐಕಳ ಪಟ್ಟೆ ಶ್ರೀ ಜಾರಂದಾಯ ದೇವಳದಲ್ಲಿ ಐಕಳ ಬಿಜೆಪಿ ಗ್ರಾಮ ಸಮಿತಿ ಕಾರ್ಯಕರ್ತರ ಆಶ್ರಯದಲ್ಲಿ ಭಾನುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು, ದ.ಕ. ಜಿ. ಪಂ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಕಿನ್ನಿಗೋಳಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ದೇವಳದ ಅಧ್ಯಕ್ಷ ರಘರಾಮ ಆಡ್ಯಂತಾಯ, ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-26061802

Comments

comments

Comments are closed.

Read previous post:
Kinnigoli-28061804
ಭೋಜ ಆರ್. ಅಮೀನ್

ಕಿನ್ನಿಗೋಳಿ : ಮೂಲ್ಕಿ ಹೋಬಳಿಯ ಹಳೆಯಂಗಡಿ ನಾನಿಲ್ ಮನೆಯ ಸ್ವಾತಂತ್ರ್ಯ ಹೋರಾಟಗಾರ ದಿ.ರುಕ್ಕಯ್ಯ ಪೂಜಾರಿ ಅವರ ಮಗ ಪ್ರಗತಿಪರ ಕೃಷಿಕ ಭೋಜ ಆರ್. ಅಮೀನ್ (83) ಅವರು ಸೋಮವಾರ...

Close