ಕೆಮ್ಮಡೆ : ಮನೆ ಬಾಗಿಲು ಉಚಿತ ಆರೋಗ್ಯ ಸೌಲಭ್ಯ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆ ವಾರ್ಡ್‌ನಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಹಕಾರದಿಂದ ಮಂಗಳೂರಿನ ಸಿ.ಹೆಚ್.ಡಿ. ಸೆಂಟ್ರಲ್ ಫೋರ್ ಹೆಲ್ತ್ ಎಂಡ್ ಡೆವಲೊಪ್‌ಮೆಂಟ್ ತಂಡದಿಂದ ಮನೆ ಬಾಗಿಲಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದ.ಕ.ಜಿ.ಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ ಕೆಮ್ಮಡೆ ವೈದ್ಯನಾಥ ದೈವಸ್ಥಾನದಲ್ಲಿ ಭಾನುವಾರ ಉದ್ಘಾಟಿಸಿದರು.
ಮೂಲ್ಕಿ – ಮೂಡಬಿದ್ರೆ ಕ್ಷೇತ್ರದ ಬಿ.ಜೆ.ಪಿ. ಅಧ್ಯಕ್ಷ ಈಶ್ವರ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಸದಸ್ಯರಾದ ಬೇಬಿ, ಮೀನಾಕ್ಷಿ, ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ತಾರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 82 ಮಂದಿ ಉಚಿತ ಆರೋಗ್ಯ ತಪಾಸಣೆಗೊಳಪಟ್ಟು, ಉಚಿತ ಔಷದಿಗಳನ್ನು ಪಡೆದುಕೊಂಡರು. ಈ ಉಚಿತ ಆರೋಗ್ಯ ಶಿಬಿರಗಳಲ್ಲಿ ಸಿ.ಎಚ್.ಡಿ. ಗುಂಪಿನ ಸಿ.ಇ.ಓ. ಡಾ. ಎಡ್ಮಂಡ್ ಫೆರ‍್ನಾಂಡಿಸ್ ಹಾಗೂ ಅವರ ತಂಡದ ಇತರ ವೈದ್ಯರಾದ ಡಾ. ರಂಜಿತ್, ಡಾ. ಸಂಜಯ್ ಕಿಣಿ ಹಾಗೂ ಡಾ. ಸುಶ್ಮಿತ ಸಹಕರಿಸಿದ್ದರು. ಸಿ.ಎಚ್.ಡಿ. ಗುಂಪಿನ ಸದಸ್ಯ, ಪೊಂಪೈ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಡಾ. ಜೋನ್ ಕ್ಲ್ಯಾರೆನ್ಸ್ ಮಿರಾಂದ ಆರೋಗ್ಯ ಶಿಬಿರಗಳನ್ನು ಸಂಯೋಜಿಸಿದ್ದರು.

Kinnigoli-26061804

Comments

comments

Comments are closed.