ಜನರಿಗೆ ಸಹಾಯವಾಗಲು ಬಸ್ ಪಾಸ್ ವ್ಯವಸ್ಥೆ

ಕಿನ್ನಿಗೋಳಿ: ದ. ಕ ಜಿಲ್ಲೆಯಲ್ಲಿ ಜನರಿಗಾಗಿ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದ್ದು 40 ಸಾವಿರ ಜನರು ಇದರ ಪ್ರಯೋಜನ ಪಡೆದಿದ್ದಾರೆ. ಅವಿಭಜಿತ ದ.ಕ. ಉಡುಪಿ ಜಿಲ್ಲೆಗಳ ಖಾಸಗಿ ಬಸ್ ಸಾರಿಗೆ ವ್ಯವಸ್ಥೆಯನ್ನು ಕೇಂದ್ರದ ಸಚಿವರು ಮೆಚ್ಚಿ ಖಾಸಗಿ ಬಸ್ ಸೇವೆಯನ್ನು ಪ್ರಶಂಸಿದ್ದಾರೆ ಎಂದು ಕೆನರಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಹೇಳಿದರು.
ಕಿನ್ನಿಗೋಳಿ ಅಭಿನಂದನಾ ಹೋಟೆಲ್ ಸಭಾಭವನದಲ್ಲಿ ಕಿನ್ನಿಗೋಳಿ ನಾಗರಿಕ ಸಮ್ಮಾನ ಸಮಿತಿಯ ಆಶ್ರಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಸಾರಿಗೆ ಇಲಾಖಾ ಸಹಾಯಕ ಉಪ ಆಯುಕ್ತ ಜಿ. ಎಸ್ ಹೆಗಡೆ ಹಾಗೂ ಅರಣ್ಯ ಇಲಾಖೆಯಿಂದ ನಿವೃತ್ತಿ ಹೊಂದಿದ ಶೇಷಪ್ಪ ಅವರನ್ನು ಸನ್ಮಾನಿಸಲಾಯಿತು.
ಸಾಲು ಮರ ತಿಮ್ಮಕ್ಕ ಅಂತರ ರಾಷ್ಟ್ರೀಯ ಪ್ರತಿಷ್ಠಾನದ ಗೌರವಾಧ್ಯಕ್ಷ ಎ. ಎಂ ಯೋಗೇಶ್ವರ್, ರಾಜ್ಯ ಬಸ್ಸು ಮಾಲಕರ ಸಂಘದ ಜಗದೀಶ ಶೆಟ್ಟಿ, ಲಾರಿ ಮಾಲಕರ ಸಂಘದ ಸಂತೋಷ್ ಕುಮಾರ್ ಹೆಗ್ಡೆ, ಅರಣ್ಯ ಸಂರಕ್ಷಣಾ, ವೀಕ್ಷಣ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ದೇವರಾಜ ಪಾಣ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮೂಡಬಿದಿರೆ ರೋಟರಿ ಶಾಲಾ ಮುಖ್ಯ ಶಿಕ್ಷಕ ವಿನ್ಸೆಂಟ್ ಡಿಕೋಸ್ತ ಮತ್ತಿತರರು ಉಪಸ್ಥಿತರಿದ್ದರು.
ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-26061803

Comments

comments

Comments are closed.