ಸ್ನೇಹ ಮನೋಭಾವನೆ ಬೆಳೆಸಿಕೊಳ್ಳಲು ಅವಕಾಶ

ಕಿನ್ನಿಗೋಳಿ: ಶ್ರಮದಾನದ ಮೂಲಕ ಸಂಘ ಸಂಸ್ಥೆಗಳ ಸಂಘಟನಾ ಶಕ್ತಿ ವೃದ್ಧಿ ಹಾಗೂ ಸಾಮಾಜಿಕ ಸ್ಪಂದನೆಗೆ ಯುವ ಜನರನ್ನು ಪ್ರೇರೇಪಿಸುವ ಕೆಲಸವು ನಡೆಯುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಮುಕ್ತವಾಗಿ ತೊಡಗಿಕೊಂಡು ಪರಸ್ಪರ ಸ್ನೇಹ ಮನೋಭಾವನೆ ಬೆಳೆಸಿಕೊಳ್ಳಲು ಉತ್ತಮ ಅವಕಾಶ ಇದೆ ಎಂದು ಶಿಕ್ಷಕ ಮುಹಮ್ಮದ್ ಹುಸೈನ್ ಹೇಳಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಸಂಯೋಜನೆಯಲ್ಲಿ ಮಂಗಳೂರಿನ ನೆಹರು ಕೇಂದ್ರದ ಸಹಕಾರದಲ್ಲಿ ಬೇಸಿಗೆ ಶಿಬಿರದ ಸ್ವಚ್ಚ ಭಾರತ ಸರಣಿ ಕಾರ್ಯಕ್ರಮದ ೭ನೇ ಸಪ್ತಾಹದ ಶ್ರಮದಾನದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತೋಕೂರು ಬಸ್ ನಿಲ್ದಾಣದಿಂದ ಮಾಗಂದಡಿವರೆಗೆ ರಸ್ತೆ ಬದಿಯ ಗಿಡಗಂಟಿಗಳ ತೆರವು ಹಾಗೂ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಲಾಯಿತು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್‌ಕುಮಾರ್, ಉದ್ಯಮಿ ಯೋಗೀಶ್ ಆಚಾರ್ಯ, ಹಿರಿಯರಾದ ಪದ್ಮನಾಭ ಕೋಟ್ಯಾನ್, ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಸದಸ್ಯರಾದ ವಿಶ್ವನಾಥ ಕೋಟ್ಯಾನ್, ಸಂಪತ್ ದೇವಾಡಿಗ, ನಾರಾಯಣ ಜಿ.ಕೆ., ಜಗದೀಶ್ ಕುಲಾಲ್, ಗಣೇಶ್ ದೇವಾಡಿಗ, ಜಯಂತ್ ಕುಂದರ್, ಮಹೇಶ್ ಬೆಳ್ಚಡ, ನೀರಜ್, ದೀಪಕ್ ದೇವಾಡಿಗ, ಶಶಿಧರ್ ಆಚಾರ್ಯ, ಅರಾಜ್, ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.
ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಸ್ವಾಗತಿಸಿದರು, ಕೋಶಾಧಿಕಾರಿ ದೀಪಕ್ ಸುವರ್ಣ ವಂದಿಸಿದರು, ಕಾರ್ಯದರ್ಶಿ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Kinnigoli-28061801

Comments

comments

Comments are closed.

Read previous post:
Kinnigoli-26061804
ಕೆಮ್ಮಡೆ : ಮನೆ ಬಾಗಿಲು ಉಚಿತ ಆರೋಗ್ಯ ಸೌಲಭ್ಯ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಮ್ಮಡೆ ವಾರ್ಡ್‌ನಲ್ಲಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಹಕಾರದಿಂದ ಮಂಗಳೂರಿನ ಸಿ.ಹೆಚ್.ಡಿ. ಸೆಂಟ್ರಲ್ ಫೋರ್ ಹೆಲ್ತ್ ಎಂಡ್ ಡೆವಲೊಪ್‌ಮೆಂಟ್ ತಂಡದಿಂದ ಮನೆ ಬಾಗಿಲಿನಲ್ಲಿ...

Close