ಕಿನ್ನಿಗೋಳಿ ಪರಿಸರ ನೆರೆ

ಕಿನ್ನಿಗೋಳಿ: ಕಿನ್ನಿಗೋಳಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ನಂದಿನಿ ನದಿ ತುಂಬಿ ಪಂಜ, ಕಿಲೆಂಜೂರು, ಮಿತ್ತಬೈಲು, ಮಲ್ಲಿಗೆಯಂಗಡಿ, ಕೊಡೆತ್ತೂರು, ಕಟೀಲು ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶ ಜಲಾವೃತ್ತಗೊಂಡಿದೆ. ಅತ್ತೂರು ಬೈಲು ಮಹಾ ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ಅತ್ತೂರು ಬೈಲು ಗಣಪತಿ ಉಡುಪ, ಉಮೇಶ್ ದೇವಾಡಿಗ, ಜನಾರ್ದನ ಉಡುಪ, ರವಿ ದೇವಾಡಿಗ ಅವರ ಮನೆ ಜಲಾವೃತಗೊಂಡಿದೆ.

ಕಟೀಲು ಸಮೀಪದ ಅಜಾರಿನಲ್ಲಿ ನಂದಿನಿ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನಲ್ಲಿ ದೂಡ್ಡ ಮರವೊಂದು ಸಿಕ್ಕಿಹಾಕ್ಕಿಕೊಂಡಿದ್ದು ಅಣೆಕಟ್ಟಿನ ಮೇಲ್ಭಾಗದ ಮೂಲಕ ನೀರು ಹಾದು ಹೋಗುತ್ತಿದ್ದು ಕಟೀಲು ಪಂಚಾಯಿತಿ ಕ್ರೈನ್ ಮೂಲಕ ತೆರವು ಕಾರ್ಯ ನಡೆಸಲಾಯಿತು.

ಪಂಜ ಕೊಕುಡೆಯಲ್ಲಿ ಸುಮಾರು 250 ಎಕರೆ ಕೃಷಿ ಭೂಮಿ ಜಲಾವೃತ ಗೊಂಡಿದೆ. ಉಲ್ಯ, ಮೊಗಪಾಡಿ, ಬೈಲಗುತ್ತು, ಕುದ್ರು ಪ್ರದೇಶಗಳು ಜಲಾವೃತ ಗೊಂಡು ಸುಮಾರು 70 ಮನೆಗಳ ಜನ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬೈಲಗುತ್ತು ಸತೀಶ್ ಶೆಟ್ಟಿಯವರು ತಮ್ಮ ಸ್ವಂತ ದೋಣಿಯಲ್ಲಿ ಪಂಚಾಯಿತಿ ಸದಸ್ಯ ಸುರೇಶ್ ದೇವಾಡಿಗ ಮತ್ತಿತರರ ಸಹಕಾರದೊಂದಿಗೆ ಜನರನ್ನು ಸ್ಥಳಾಂತರಿಸುದಕ್ಕೆ ಸಹಕರಿಸಿದರು. ಶೋಭಾ ಸೀತಾರಾಮ ಪೂಜಾರಿ, ಗಂಗಾ ಪೂಜಾರಿ ಲಕ್ಷಣ ಪೂಜಾರಿ, ರಾಜು ಪೂಜಾರಿ ಅವರ ಮನೆ ಜಲಾವೃತಗೊಂಡಿದೆ. ಕಿಲೆಂಜೂರು ಪ್ರದೇಶದಲ್ಲಿಯೂ ನೆರೆ ಅವರಿಸಿದ್ದು, ರಾಘು ಕರ್ಕೇರ, ದೇವಕಿ ಕಡಪು, ಕೋಟಿ ದೇವಾಡಿಗ, ಬಾಬು ದೇವಾಡಿಗ, ಮೋನಪ್ಪ ಮೂಲ್ಯ, ಪುರಂದರ ದೇವಾಡಿಗ ಗೋವರ್ದನ ಮೂಲ್ಯ, ಗೋವಿಂದ ಪೂಜಾರಿ ವೆಂಕಪ್ಪ ಪೂಜಾರಿ ಅವರ ಮನೆ ಜಲಾವೃತವಾಗಿದೆ.
ಬಳಕುಂಜೆಯಲ್ಲಿ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತ್ತಗೊಂಡಿದೆ, ಈ ಪ್ರದೇಶದಲ್ಲಿ ಸುಮಾರು ೧೫ ಮನೆಗಳಿದ್ದು ನೀರಿನ ಮಟ್ಟ ಹೆಚ್ಚಾದರೆ ಸಂಪರ್ಕ ಕಳೆದುಕೊಳ್ಳಲಿದೆ.

ಬಳಕುಂಜೆ ಹಾಗೂ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಶಾಂಭವಿ ನದಿ ಉಕ್ಕಿ ಹರಿದು ಪೆರ್ಗುಂಡಿ, ಕರಿಯತ್ತಲ ಗುಂಡಿ ಉಳೆಪಾಡಿ, ಪಟ್ಟೆ ಕ್ರಾಸ್ ಮತ್ತಿತರ ಪ್ರದೇಶದಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದೆ. ನೂರಾರು ಎಕ್ಕರೆ ಕೃಷಿ ಭೂಮಿಗೆ ಹಾನಿಯಾಗಿದೆ.

ಜಲಾವೃತಗೊಂಡ ಪ್ರದೇಶಕ್ಕೆ ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೂಡ್ಕರ್, ಗ್ರಾಮಕರಣಿಕ ಪ್ರದೀಪ್ ಶಣೈ, ಸಂತೋಷ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ರಶ್ಮೀ ಆಚಾರ್ಯ, ಶುಭಲತಾ ಶೆಟ್ಟಿ. ಶರತ್ ಕುಬೆವೂರು, ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್, ನಾಗೇಶ್ ಬೋಳ್ಳೂರು, ಗೀತಾ ಪೂಜಾರ್ತಿ, ಕಿರಣ್ ಕುಮಾರ್ ಶೆಟ್ಟಿ, ದಿವಾಕರ ಚೌಟ, ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ದೇವಾಡಿಗ, ಜನಾರ್ದನ ಕಿಲೆಂಜೂರು, ರಮಾನಂದ ಪೂಜಾರಿ, ಅರುಣ್ ಕುಮಾರ್ ಸೇಸಪ್ಪ ಸಾಲಿಯಾನ್ ಮತ್ತಿತರರು ಭೇಟಿ ನೀಡಿದರು.

Kinnigoli-28061801

ಮಹಾಗಣಪತಿ

Kinnigoli-28061802

ಕಿಲೆಂಜೂರು

Kinnigoli-28061803

ಮಿತ್ತಬೈಲು

Kinnigoli-28061804

ಉಲ್ಯ

Kinnigoli-28061805

ಅಜಾರು

Kinnigoli-28061807

Kinnigoli-28061806

Comments

comments

Comments are closed.

Read previous post:
Kinnigoli-26061805
ಸುಭಾಶ್ಚಂದ್ರ ಮಿತ್ತುಂಜೆ

ಕಿನ್ನಿಗೋಳಿ : ನಿಡ್ಡೋಡಿ ನಿವಾಸಿ ಸುಭಾಶ್ಚಂದ್ರ ಮಿತ್ತುಂಜೆ (50) ಬುಧವಾರ ಮುಂಜಾನೆ 2 ಗಂಟೆಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಒರ್ವ ಪುತ್ರನನ್ನು...

Close