ಲಿಟ್ಲ್ ಪ್ಲವರ್ ಹಿ. ಪ್ರಾ. ಸಂಸತ್ತಿನ ಚುನಾವಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಪ್ಲವರ್ ಹಿ. ಪ್ರಾ. ಶಾಲೆಯ 2018-19 ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಚುನಾವಣೆಯ ಮಾದರಿಯಲ್ಲಿ ಗುರುತು ಚೀಟಿ, ಮತದಾನ ಕೇಂದ್ರ ಮತ್ತು ವಿವಿಧ ಹಂತದ ಅಧಿಕಾರಿಗಳ ಪಾತ್ರವನ್ನು ಮಕ್ಕಳು ನಿರ್ವಹಿಸಿ ಚುನಾವಣೆಯನ್ನು ನಡೆಸಿದರು. 7 ನೇ ತರಗತಿಯ ದೀಪಾ ವಿದ್ಯಾರ್ಥಿ ನಾಯಕಿಯಾಗಿ 6 ನೇತರಗತಿಯ ರಕ್ಷಾ ಉಪನಾಯಕಿಯಾಗಿ ಆಯ್ಕೆಯಾದರು. ಶಾಲಾ ಮುಖ್ಯ ಶಿಕ್ಷಕಿ ಹಿಲ್ದಾ ರೊಡ್ರಿಗಸ್ ಮತ್ತು ಸಹಶಿಕ್ಷಕಿ ಪದ್ಮಾವತಿ ಅವರು ಚುನಾವಣೆಯ ವಿಶೇಷ ಅಧಿಕಾರಿಗಳಾಗಿ ಮಾರ್ಗದರ್ಶನ ನೀಡಿದರು. ಬಳಿಕ ಮಂತ್ರಿ ಮಂಡಲದ ಸದಸ್ಯರ ಪ್ರಮಾಣವಚನ ನಡೆಯಿತು. ಮುಖ್ಯ ಶಿಕ್ಷಕರು ಮಂತ್ರಿ ಮಂಡಲದ ಪ್ರಮಾಣ ವಚನ ಭೋದಿಸಿದರು.

Kinnigoli-28061806

Comments

comments

Comments are closed.