ಯೋಗ ಪ್ರಾಣಾಯಾಮದಿಂದ ಆರೋಗ್ಯ ರಕ್ಷಣೆ

ಕಿನ್ನಿಗೋಳಿ: ಯೋಗ ಹಾಗೂ ಪ್ರಾಣಾಯಾಮದಿಂದ ಆರೋಗ್ಯ ರಕ್ಷಣೆ ಸಾಧ್ಯವಿದೆ ಎಂದು ಮೂಡಬಿದ್ರಿ ವಲಯದ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ಶರತ್ ಜಿ. ಹೇಳಿದರು.
ತೋಕೂರು ಯುವಕ ಸಂಘದ ಸಭಾಂಗಣದಲ್ಲಿ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮಂಗಳೂರು ನೆಹರು ಯುವ ಕೇಂದ್ರ, ತೋಕೂರು ಯುವಕ ಸಂಘ, ಮಹಿಳಾ ಮಂಡಳಿ ಸಂಸ್ಥೆಗಳ ಸಹಕಾರದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪ್ರಾಣಾಯಾಮ, ಯೋಗಮುದ್ರೆಯ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಯೋಗ ಪಟುಗಳಾದ ಕಿಶೋರ್ ಮತ್ತು ಸವಿತಾ ಅವರು ಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಮಹಿಳಾ ಮಂಡಲದ ಅಧ್ಯಕ್ಷೆ ವಿಪುಲಾ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.
ಯುವಕ ಸಂಘದ ಅಧ್ಯಕ್ಷ ಹೇಮನಾಥ್ ಅಮೀನ್ ಸ್ವಾಗತಿಸಿದರು, ನಿಕಟಪೂರ್ವ ಅಧ್ಯಕ್ಷ ಹರಿದಾಸ್ ಭಟ್ ನಿರೂಪಿಸಿದರು.
ಸ್ಥಳೀಯ ಗ್ರಾಮಸ್ಥರು ಹಾಗೂ ಸಂಘದ ಸದಸ್ಯರು ಶಿಬಿರದಲ್ಲಿ ಪಾಲ್ಗೊಂಡರು.

Kinnigoli-28061809

Comments

comments

Comments are closed.

Read previous post:
Kinnigoli-28061808
ಲಿಟ್ಲ್ ಫ್ಲವರ್ ಪ್ರೌಢ ಶಾಲೆ : ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಅನುದಾನಿತ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ೫೫ ವಿದ್ಯಾರ್ಥಿಗಳಿಗೆ ಸುಮಾರು 40,000 ರೂಪಾಯಿ ಮೌಲ್ಯದ ಸಮವಸ್ತ್ರವನ್ನು ಕಿನ್ನಿಗೋಳಿ ಉದ್ಯಮಿ ಕೊಡುಗೈ ದಾನಿ ರುಡಾಲ್ಫ್ ಫೆರ್ನಾಂಡಿಸ್ ವಿತರಿಸಿದರು....

Close