ಜುಲ್ಯೆ 1: ಸಸಿಹಿತ್ಲು ಬಿಲ್ಲವ ಸಂಘ ಕೆಸರುಗದ್ದೆ

ಕಿನ್ನಿಗೋಳಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸಸಿಹಿತ್ಲು ಅಗ್ಗದ ಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ 4ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವವು ಜುಲ್ಯೆ 1 ರ ಆದಿತ್ಯವಾರದಂದು ಸಂಘದ ಹಿಂಭಾಗದ ಕುಂಬ್ಲು ತೋಟ ಬಾಕಿಮಾರು ಗದ್ದೆಯಲ್ಲಿ ದ.ಕ. , ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ಜರಗಲಿದೆ. ಪುರುಷರ ಕೆಸರುಗದ್ದೆ ಹಗ್ಗ ಜಗ್ಗಾಟದಲ್ಲಿ ಮೊದಲು ಬಂದ 20 ತಂಡಕ್ಕೆ ಮಾತ್ರ ಅವಕಾಶವಿದ್ದು ಒಂದು ತಂಡದಲ್ಲಿ 7 ಜನಕ್ಕೆ ಅವಕಾಶವಿದೆ ಪ್ರಥಮ ಬಹುಮಾನ ರೂ 15,000, ದ್ವಿತೀಯ ಬಹುಮಾನ ರೂ 10,000 ನಗದು, ಹಾಗೂ ಶಾಸ್ವತ ಫಲಕ ನೀಡಲಾಗುವುದು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ರೂ 10,000, ದ್ವಿತೀಯ ಬಹುಮಾನ ರೂ 5,000 ಹಾಗೂ ಶಾಸ್ವತ ಫಲಕ ನೀಡಲಾಗುವುದು. ಪಿರಮಿಡ್ ರಚಿಸಿ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರ ಒಂದೇ ವಿಭಾಗವಿದ್ದು ಒಂದು ತಂಡದಲ್ಲಿ 11 ಮಂದಿಗೆ ಅವಕಾಶವಿದೆ. ಪ್ರಥಮ ಬಹುಮಾನ ರೂ 5,000, ದ್ವಿತೀಯ ಬಹುಮಾನ ರೂ 2,000, ಕೆಸರುಗದ್ದೆಯಲ್ಲಿ ಜಾನಪದ ಕುಣಿತ ಸ್ಪರ್ಧೆಯಲ್ಲಿ ಮುಕ್ತ ಅವಕಾಶವಿದ್ದು ಒಂದು ತಂಡದಲ್ಲಿ ಕನಿಷ್ಠ 4 ಮಂದಿ,  ಪ್ರಥಮ ಬಹುಮಾನ ರೂ 8000,  ದ್ವಿತೀಯ ಬಹುಮಾನ ರೂ 5,000, ಮೊದಲ ಹತ್ತು ತಂಡಕ್ಕೆ ಮಾತ್ರ ಅವಕಾಶವಿದ್ದು ಜೊತೆಗೆ ಇತರ ಸ್ಪರ್ಧೆಗಳಿದ್ದು ಭಾಗವಹಿಸಲಿಚ್ಚಿಸುವವರು ನರೇಶ್ ಕುಮಾರ್ 9449642165, ವಸಂತ ಪೂಜಾರಿ 9110496717, ಭಾಸ್ಕರ ಕೋಟ್ಯಾನ್ 7975367762 ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-28061806
ಲಿಟ್ಲ್ ಪ್ಲವರ್ ಹಿ. ಪ್ರಾ. ಸಂಸತ್ತಿನ ಚುನಾವಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಿಟ್ಲ್ ಪ್ಲವರ್ ಹಿ. ಪ್ರಾ. ಶಾಲೆಯ 2018-19 ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಚುನಾವಣೆಯ ಮಾದರಿಯಲ್ಲಿ ಗುರುತು ಚೀಟಿ, ಮತದಾನ ಕೇಂದ್ರ...

Close