ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ

ಕಿನ್ನಿಗೋಳಿ: ಇಂದಿಗೂ ಬಹಳಷ್ಟು ರೈತರು ಕೃಷಿಯನ್ನೇ ನಂಬಿ ಬದುಕಿದ್ದಾರೆ. ಕೃಷಿ ಚಟುವಟಿಕೆ ನಡೆಯುವ ಸಂದರ್ಭ ಕೃಷಿ ಅಧಿಕಾರಿಗಳು ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಮಂಗಳೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಐಕಳ ಗ್ರಾಮ ಪಂಚಾಯಿತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮತ್ತು ಕೃಷಿ ಇಲಾಖೆ ವತಿಯಿಂದ ಬುಧವಾರ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಮಗ್ರ ಕೃಷಿ ಅಭಿಯಾನದ ವಾಹನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ, ತೋಟಗಾರಿಕೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಶರತ್ ಕುಬೆವೂರು, ರಶ್ಮಿ ಆಚಾರ್ಯ, ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ಉಪಾಧ್ಯಕ್ಷೆ ಸುಂದರಿ ಸಾಲಿಯಾನ್, ಪಿ.ಡಿ.ಒ ನಾಗರತ್ನ, ಪಶುವೈದ್ಯಾಧಿಕಾರಿ ಸತ್ಯಶಂಕರ್, ಕೃಷಿ ಅಧಿಕಾರಿ ಅಬ್ದುಲ್ ಬಶೀರ್, ಸಹಾಯಕ ಕೃಷಿ ಅಧಿಕಾರಿ ವೀಣಾ, ಉಪ ಕೃಷಿ ನಿರ್ದೇಶಕ ಮುತ್ತುರಾಜ್, ತೋಟಗಾರಿಕಾ ಯುಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Kinnigoli-29061803

Comments

comments

Comments are closed.

Read previous post:
Kinnigoli-29061802
ಶ್ರೀ ರಾಮ ಯುವಕ ವೃಂದ ಶ್ರಮದಾನ

ಕಿನ್ನಿಗೋಳಿ; ಗೋಳಿಜೋರ ಶ್ರೀ ರಾಮ ಯುವಕ ವೃಂದದ ವತಿಯಿಂದ ಕಿನ್ನಿಗೋಳಿ ಗೋಳಿಜೋರ ಮುಖ್ಯ ರಸ್ತೆಯ ಇಬ್ಬದಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡವಾಗಿ ಬೆಳೆದ ಮರದ ಗೆಲ್ಲುಗಳು, ಗಿಡಗಳನ್ನು ಕಡಿದು...

Close