ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ

ಕಿನ್ನಿಗೋಳಿ: ಗ್ರಾಮೀಣ ಪ್ರತಿಭೆಗಳಲ್ಲಿ ದೈಹಿಕ ಕ್ಷಮತೆ ಹೆಚ್ಚಾಗಿರುವ ಕಾರಣ ಅವರಲ್ಲಿನ ಕ್ರೀಡಾಶಕ್ತಿಯನ್ನು ಹೆಚ್ಚಿಸಿ ಉತ್ತಮ ಅವಕಾಶ ನೀಡಿದಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಹೊರಹೊಮ್ಮಲು ಸಾಧ್ಯವಿದೆ. ಹಳೆಯಂಗಡಿಯಂತಹ ಗ್ರಾಮದಲ್ಲಿ ಟೊರ್ಪೆಡೋಸ್ ಕ್ರೀಡಾ ಸಂಸ್ಥೆ ಇಂತಹ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ, ನಗರದಲ್ಲಿನ ಒತ್ತಡದ ವಾತಾವರಣವನ್ನು ಬಾಡ್ಮಿಂಟನ್ ಆಟದಿಂದ ದೈಹಿಕವಾಗಿ ಆರೋಗ್ಯದಿಂದ ಇರಲು ಸಾಧ್ಯವಿದೆ. ರಾಷ್ಟ್ರೀಯ ಬಾಡ್ಮಿಂಟನ್ ಚಾಂಪಿಯನ್ ಹಾಗೂ ಕರ್ನಾಟಕ ಬಾಡ್ಮಿಂಟನ್ ಅಸೋಸಿಯೇಶನ್‌ನ ಕಾರ್ಯದರ್ಶಿ ಅನುಪ್ ಶ್ರಿಧರ್ ಹೇಳಿದರು.
ಹಳೆಯಂಗಡಿ ತೋಕೂರು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಒಳಾಂಗಣ ಕ್ರೀಡಾಂಗಣದಲ್ಲಿರುವ ಬಾಡ್ಮಿಂಟನ್ ಕೋರ್ಟ್‌ಗೆ ಭೇಟಿ ನೀಡಿ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡಿ ಯಾವುದೇ ವಯೋಮಿತಿಯಲ್ಲಿ ಇರುವವರು ಸಹ ಈ ಕ್ರೀಡೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಅಸೋಸಿಯೇಶನ್ ಸಹ ಅನೇಕ ಸ್ಪರ್ಧೆಗಳಿಗೆ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತಿದೆ. ಉದಯೋನ್ಮುಖ ಯುವ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ನೀಡುವಲ್ಲಿ ಅಸೋಸಿಯೇಶನ್ ಮುಂದಾಗಿದೆ ಎಂದರು.

ಈ ಸಂದರ್ಭ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಕ್ಲಬ್‌ನ ನಿರಂತರ ಚಟುವಟಿಕೆ ಹಾಗೂ ವಿವಿಧ ಕ್ರೀಡಾಳುಗಳು ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಬಗ್ಗೆ ವಿವರ ನೀಡಿ, ಸ್ಥಳೀಯ ಸರಕಾರಿ ಶಾಲೆಯ ಮಕ್ಕಳಿಗೆ ಬಾಡ್ಮಿಂಟನ್ ಕ್ರೀಡೆಯನ್ನು ಪರಿಚಯಿಸಿದ ಬಗ್ಗೆ ತಿಳಿಸಿದರು.
ಸಹ ಕಾರ್ಯದರ್ಶಿ ಕೇಶವ್, ರಾಜೇಶ್, ಸಂತೋಷ್, ಮಧುಕರ್, ಸಂತೋಷ್‌ಕುಮಾರ್, ಗುರುರಾಜ್, ಪುಷ್ಪರಾಜ್, ತೇಜು, ಕಿರಣ್‌ಕುಮಾರ್, ಸುರೇಶ್ ಬೈಲು, ಕೆ.ಪಿ.ಜೋಸೆಫ್, ಧನಂಜಯ ಕುಮಾರ್, ಯಶವಂತ್, ಸುಜಿತ್ ಹಾಗೂ ಕ್ಲಬ್‌ನ ತರಬೇತುದಾರ ವಿವೇಕ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29061804

Comments

comments

Comments are closed.