ಕಟೀಲು ಚರ್ಚ್ ಉಚಿತ ಆರೋಗ್ಯ ಶಿಬಿರ

ಕಿನ್ನಿಗೋಳಿ : ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿ ಇರಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ನೆಮ್ಮದಿಯ ಜೀವನ ಸಾಗಿಸಬಹುದು ಎಂದು ಶ್ರೀನಿವಾಸ ವೈದ್ಯಕೀಯ ಮಹಾ ವಿದ್ಯಾಲಯ ವೈದ್ಯಾಧಿಕಾರಿ ಡಾ. ಡೇವಿಡ್ ರೋಜಾರಿಯೊ ಹೇಳಿದರು.
ಸಂತ ಜಾಕೋಬ್ ಚರ್ಚ್ ಕಟೀಲು ಹಾಗೂ ಶ್ರೀನಿವಾಸ ವೈದ್ಯಕೀಯ ಮಹಾ ವಿದ್ಯಾಲಯ ಮುಕ್ಕ ಇವರ ಜಂಟೀ ಆಶ್ರಯದಲ್ಲಿ ಕಟೀಲು ಸಂತ ಜಾಕೋಬ್ ಚರ್ಚ್ ಆವರಣದಲ್ಲಿ ಭಾನುವಾರ ನಡೆದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತವರ್ಗೀಕರಣ ಶಿಬಿರದಲ್ಲಿ ಮಾತನಾಡಿದರು.
ಈ ಸಂದರ್ಭ ಶ್ರೀನಿವಾಸ ವೈದ್ಯಕೀಯ ಮಹಾ ವಿದ್ಯಾಲಯದ ಅಧಿಕಾರಿ ಕಿಶೋರ್ ಕುಮಾರ್, ಕಟೀಲು ಸಂತ ಜಾಕೋಬ್ ಚರ್ಚ್ ಧರ್ಮಗುರು ಮತ್ತು ಸಮನ್ವಯ ಸಂಸ್ಥೆಯ ನಿರ್ದೇಶಕ ಡಾ. ರೋನಾಲ್ಡ್ ಕುಟಿನ್ಹಾ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಆಂಡ್ರ್ಯೂ ಮಿಸ್ಕಿತ್, ಕೆಥೋಲಿಕ್ ಸಭಾ ಅಧ್ಯಕ್ಷೆ ಪ್ರಮೀಳಾ ಉಪಸ್ಥಿತರಿದ್ದರು.
ಪ್ರಜ್ವಲ್ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆಸಿಂತ ರೋಡ್ರಿಗಸ್ ಸ್ವಾಗತಿಸಿದರು. ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಅಲೆಕ್ಸ್ ತಾವ್ರೋ ವಂದಿಸಿದರು. ವಿನ್ನಿಫ್ರೆಡ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01071801

Comments

comments

Comments are closed.

Read previous post:
Kinnigoli-30061801
ಮೆನ್ನಬೆಟ್ಟು : ಸಮಗ್ರ ಕೃಷಿ ಅಭಿಯಾನ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಅಭಿಯಾನದ ಸಂಚಾರಿ ಮಾಹಿತಿ ಕಾರ್ಯಕ್ರಮ ಕೃಷಿ ಇಲಾಖಾಧಿಕಾರಿಗಳು ನಡೆಸಿಕೊಟ್ಟರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ...

Close