ಉತ್ತಮ ಶಿಕ್ಷಣದಿಂದ ಭವ್ಯ ಸಮಾಜ ನಿರ್ಮಾಣ

ಕಿನ್ನಿಗೋಳಿ: ಉತ್ತಮ ಶಿಕ್ಷಣದಿಂದ ಭವ್ಯ ಸಮಾಜ ನಿರ್ಮಾಣ. ಅರ್ಹರಿಗೆ ಶೈಕ್ಷಣಿಕವಾಗಿ ನೀಡುವ ನೆರವು ಸಮಾಜದ ಏಳಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಎಸ್.ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಕರ್ಕೇರ ಹೇಳಿದರು.
ತೋಕೂರು ಯುವಕ ಮಂಡಲದ ಸಭಾಂಗಣದಲ್ಲಿ ತೋಕೂರು ಯುವಕ ಸಂಘದ ವತಿಯಿಂದ ನಡೆದ ಪುಸ್ತಕ ಹಾಗೂ ಶಾಲಾ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಕ ಸಂಘದ ಅಧ್ಯಕ್ಷ ಹೇಮಂತ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಶ್ರೀ ಸುಬ್ರಹ್ಮಣ್ಯ ಸರಕಾರಿ ಶಾಲೆ ಮತ್ತು ತೋಕೂರು ಸರಕಾರಿ ಹಿಂದುಸ್ತಾನಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ಬ್ಯಾಗ್ ಮತ್ತಿತರ ಶಿಕ್ಷಣಕ್ಕೆ ಸಂಬಂಧಿಸಿದ ಪರಿಕರಗಳನ್ನು ಹಾಗೂ ಅಂಗನವಾಡಿ ಮಕ್ಕಳಿಗೆ ಬ್ಯಾಗ್‌ಗಳನ್ನು ರೂ. 35 ಸಾವಿರ ರೂ. ವೆಚ್ಚದಲ್ಲಿ ವಿತರಿಸಲಾಯಿತು.
ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ವಾಸು ನಾಯಕ್ ಶುಭಹಾರೈಸಿದರು.
ಮಹಿಳಾ ಮಂಡಲದ ಅಧ್ಯಕ್ಷ ವಿಪುಲಾ ಡಿ. ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿಸಿದರು.

Kinnigoli-01071802

Comments

comments

Comments are closed.

Read previous post:
Kinnigoli-01071801
ಮೆನ್ನಬೆಟ್ಟು ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವತಿಯಿಂದ ಮೆನ್ನಬೆಟ್ಟು ಗ್ರಾಮದ ಪ.ಜಾ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಶ್ರೇಯೋಭಿವೃದ್ಧಿ ನಿಧಿಯಿಂದ ಪುಸ್ತಕ ಬ್ಯಾಗ್ ಕೊಡೆ ವಿತರಿಸಲಾಯಿತು. ಈ...

Close