ಐಕಳದಲ್ಲಿ ಹುಲಿ ಪತ್ತೆ… ?

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ ಬಳಿ ಹುಲಿ ಒಂದು ಪತ್ತೆಯಾಗಿದೆ. ನೆಲ್ಲಿಗುಡ್ಡೆ ನಿವಾಸಿ ಐವಾನ್ ಸಲ್ಡಾನ ಸೋಮವಾರ ಬೆಳಿಗ್ಗೆ ೮.೩೦ಕ್ಕೆ ತಮ್ಮ ಮನೆಯ ಅಡಿಕೆ ತೋಟಕ್ಕೆ ಹೋಗುವಾಗ ಎದುರಿನಲ್ಲಿ ಹುಲಿ ಕಂಡು ಬಂದಿದ್ದು ಐವನ್ ಅವರು ಬೊಬ್ಬೆ ಹಾಕಿದಾಗ ಹುಲಿ ಪಕ್ಕದ ಪ್ರಾನ್ಸಿಸ್ ರೆಬೆಲ್ಲೋ ಎಂಬುವವರ ತೋಟದ ಕಂಪೌಂಡ್ ಒಳಗೆ ಹಾರಿ ಪಕ್ಕದ ಗುಡ್ಡಕ್ಕೆ ಓಡಿಹೋಗಿದೆ ಎಂದು ತಿಳಿಸಿದ್ದಾರೆ.
ಐವನ್ ಅವರು ಕೂಡಲೇ ಅರಣ್ಯ ಇಲಾಖೆ ಮತ್ತು ಮೂಲ್ಕಿ ಪೋಲಿಸರಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯೂ ಮತ್ತು ಮೂಲ್ಕಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಹುಲಿ ಓಡಿ ಹೋದ ಜಾಗದಲ್ಲಿ ಹೆಜ್ಜೆ ಗುರುತನ್ನು ಜಾಲಾಡಿದ್ದು ತೋಟದಲ್ಲಿ ಹುಲ್ಲು ಇದ್ದ ಕಾರಣ ಸರಿಯಾಗಿ ಕಂಡು ಬಂದಿಲ್ಲ. ಈವರೆಗೆ ಮೂಡಬಿದ್ರೆ ವಲಯದಲ್ಲಿ ಅನೇಕ ಕಡೆ ಚಿರತೆಗಳು ಮಾತ್ರ ಕಂಡು ಬಂದಿತ್ತು ಅವಿಭಜಿತ ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಹುಲಿ ಕಂಡು ಬಂದ ಪ್ರಕರಣಗಳು ಇಲ್ಲ. ಚಿರತೆ ಆಗಿರುವ ಸಾಧ್ಯತೆಗಳೇ ಹೆಚ್ಚು ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯೂ ಹೇಳಿದರು.

Kinnigoli-02071803

Comments

comments

Comments are closed.

Read previous post:
Kinnigoli-02071802
ಕೆನರಾ ಬ್ಯಾಂಕ್ ಸನ್ಮಾನ

ಕಿನ್ನಿಗೋಳಿ : ಕಿನ್ನಿಗೋಳಿ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕರಾಗಿ 38 ವರ್ಷ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ವಿ ಸುಕುಮಾರ ಅವರಿಗೆ ವಿದಾಯ ಕೂಟ ನಡೆಯಿತು. ಕಿನ್ನಿಗೋಳಿ ಕೆನರಾ ಬ್ಯಾಂಕ್...

Close