ಕಿನ್ನಿಗೋಳಿ ಲಯನ್ಸ್ ಪದಗ್ರಹಣ

ಕಿನ್ನಿಗೋಳಿ : ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಸೇವೆಯ ರೂಪದಲ್ಲಿ ಸಹಾಯ ಹಸ್ತ ನೀಡುತ್ತಿರುವುದು ಲಯನ್ಸ್ ಸೇವಾ ಸಂಸ್ಥೆಯ ಮೂಲ ಉದ್ದೇಶ ಎಂದು ಲಯನ್ಸ್ ಜಿಲ್ಲೆ 317ಡಿ ಯ ಡಾ. ಗೀತಾ ಪ್ರಕಾಶ್ ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ಭಾನುವಾರ ನಡೆದ ಕಿನ್ನಿಗೋಳಿ ಲಯನ್ಸ್ ಕ್ಲಬ್ ಹಾಗೂ ಲಯನೆಸ್ ಕ್ಲಬ್ 2018-19 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಮಿಶಲ್ ರೋಡ್ರಿಗಸ್ ಅವರನ್ನು ಗೌರವಿಸಲಾಯಿತು.
ಐಕಳ ಪೊಂಪೈ ಕಾಲೇಜು ಎನ್‌ಎಸ್‌ಎಸ್ ಯೋಜನಾಧಿಕಾರಿಗಳಾದ ವಿಕ್ಟರ್ ವಾಸ್ ಹಾಗೂ ಸಿಲ್ವಿಯ್ ಪಾಯಸ್ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಡೋನಿ ಮಿನೇಜಸ್, ಡಾ. ಗಾಯತ್ರಿ ಗೀತ್‌ಪ್ರಕಾಶ್, ಪ್ರಾಂತ್ಯಧ್ಯಕ್ಷ ಚಂದ್ರಶೇಖರ ನಾನಿಲ್, ವಲಯಾಧ್ಯಕ್ಷ ಗಣೇಶ್ ಶೆಟ್ಟಿ, ಉದಯ ಅಮೀನ್ ಮಟ್ಟು, ಮೆಲ್ವಿನ್ ಡಿಸೋಜ, ಗಂಗಾಧರ್ ಎಕ್ಕಾರು, ಜೇಮ್ಸ್ ಮೆಂಡನ್ ಹೊಸದುರ್ಗ ಮುಲ್ಕಿ, ರೇಶ್ಮಾ ಆರ್ ಮಿನೇಜಸ್, ಸ್ಮಿತಾ ಎಮ್ ಡಿಸೋಜ, ಜೋಸೆಫ್ ಮಿನೇಜಸ್, ಮಲತಾ ಎಸ್. ಶೆಟ್ಟಿ, ಸುರೇಖಾ ನಾಗೇಶ್, ಸವಿತಾ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಶಾಂಭವಿ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಹಿಲ್ಡಾ ಡಿಸೋಜ ವಂದಿಸಿದರು. ಪ್ರೊ. ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Kinnigoli-01071802

Comments

comments

Comments are closed.

Read previous post:
Kinnigoli-01071802
ಉತ್ತಮ ಶಿಕ್ಷಣದಿಂದ ಭವ್ಯ ಸಮಾಜ ನಿರ್ಮಾಣ

ಕಿನ್ನಿಗೋಳಿ: ಉತ್ತಮ ಶಿಕ್ಷಣದಿಂದ ಭವ್ಯ ಸಮಾಜ ನಿರ್ಮಾಣ. ಅರ್ಹರಿಗೆ ಶೈಕ್ಷಣಿಕವಾಗಿ ನೀಡುವ ನೆರವು ಸಮಾಜದ ಏಳಿಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಎಸ್.ಕೋಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್...

Close