ಮಹಿಳೆಯರು ಶೈಕ್ಷಣಿಕವಾಗಿ ಸದೃಡರಾಗಬೇಕು

ಕಿನ್ನಿಗೋಳಿ : ಮಹಿಳೆಯರು ಶೈಕ್ಷಣಿಕವಾಗಿ ಸದೃಡರಾಗಬೇಕು. ಮಾನಸಿಕವಾಗಿ ನಿರ್ದಿಷ್ಟ ಗುರಿ ಹೊಂದಿ ಕೆಲಸ ಕಾರ್ಯ ನಿರ್ವಹಿಸಿದರೆ ಯಶಸ್ಸು ಲಭಿಸುತ್ತದೆ. ನಮ್ಮ ಮಕ್ಕಳಿಗೆ ಮಾಲ್ಯಾಧಾರಿತ ಶಿಕ್ಷಣ ನೀಡಬೇಕು. ಎಂದು ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕಿ ಭುವನೇಶ್ವರೀ ಹೆಗಡೆ ಹೇಳಿದರು.
ಭಾನುವಾರ ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್‌ನ ಕಿನ್ನಿಗೋಳಿ ಇನ್ನರ್‌ವೀಲ್ ಕ್ಲಬ್ ನೂತನ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷೆ ಶ್ವೇತಾ ಹೆಗ್ಡೆ ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು. ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ. ಬಿ ಸುರೇಶ್ ಪ್ಲಾಸ್ಟಿಕ್ ಜಾಗೃತಿಯ ಕರ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ದಾಕ್ಷಾಯಣಿ, ಸೌಜನ್ಯ ಕುಲಾಲ್, ಸ್ವಸ್ತಿಕ್ ಸಾಲ್ಯಾನ್ , ಸೂರಜ್, ಹಾಗೂ ಜ್ಯೋತಿ ಹಾಗೂ ನೀತಾ ಸಾಲ್ಯಾನ್ ಅವರಿಗೆ ವೈದ್ಯಕೀಯ ವೆಚ್ಚಕ್ಕೆ ನೆರವು ನೀಡಲಾಯಿತು.
ಸಂಗೀತಾ ಶೆಟ್ಟಿ ಹಾಗೂ ಶ್ವೇತಾ ಶೆಟ್ಟಿ ಅವರನ್ನು ಕ್ಲಬ್ ಸದಸ್ಯರಾಗಿ ಸೇರ್ಪಡೆಗೊಳಿಸಲಾಯಿತು.
ಕಾರ್ಯದರ್ಶಿ ಮಲ್ಲಿಕಾ ಪೂಂಜಾ ಉಪಸ್ಥಿತರಿದ್ದರು.
ನಿರ್ಗಮನ ಕಾರ್ಯದರ್ಶಿ ಶಾರಾದಮ್ಮ ವರದಿ ವಾಚಿಸಿದರು. ನಿರ್ಗಮನ ಅಧ್ಯಕ್ಷೆ ರಾಧಾ ಶೆಣೈ ಸ್ವಾಗತಿಸಿದರು. ವೀಣಾ ಶೆಟ್ಟಿ ಪರಿಚಯಿಸಿದರು. ಉಪನ್ಯಾಸಕಿ ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

Kinnigoli-02071804

Comments

comments

Comments are closed.

Read previous post:
Kinnigoli-02071803
ಐಕಳದಲ್ಲಿ ಹುಲಿ ಪತ್ತೆ… ?

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ ಬಳಿ ಹುಲಿ ಒಂದು ಪತ್ತೆಯಾಗಿದೆ. ನೆಲ್ಲಿಗುಡ್ಡೆ ನಿವಾಸಿ ಐವಾನ್ ಸಲ್ಡಾನ ಸೋಮವಾರ ಬೆಳಿಗ್ಗೆ ೮.೩೦ಕ್ಕೆ ತಮ್ಮ ಮನೆಯ ಅಡಿಕೆ ತೋಟಕ್ಕೆ...

Close