ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್

ಕಿನ್ನಿಗೋಳಿ: ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಡಾ. ಪೀಟರ್ ಪೌಲ್ ಸಲ್ಡಾನಾ ಆಯ್ಕೆಯಾಗಿದ್ದಾರೆ.
ಕಿನ್ನಿಗೋಳಿ ಸಮೀಪದ ಐಕಳ ಕಜೆಗುರಿ ನಿವಾಸಿಯಾಗಿದ್ದ ಇವರು ದಿ. ಲಾಜರಸ್ ಸಲ್ಡಾನಾ ಹಾಗೂ ಎಲಿಜಾ ಸಲ್ಡಾನಾ ಅವರ 9 ಮಕ್ಕಳಲ್ಲಿ 4ನೇಯವರಾಗಿ 1964 ಎಪ್ರಿಲ್ 27 ರಂದು ಜನಿಸಿದರು. ಬಾಲ್ಯದಲ್ಲೇ ಚುರುಕಿನ ಮತ್ತು ಬುದ್ದಿವಂತ ವಿದ್ಯಾರ್ಥಿಯಾಗಿದ್ದರು.
ತಾಳಿಪಾಡಿ ಪೊಂಪೈ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿ.ಯು.ಸಿ ಶಿಕ್ಷಣ ಪೂರೈಸಿ 1991 ಮೇ 6 ರಂದು ಗುರು ದೀಕ್ಷೆ ಪಡೆದರು.
ಉಡುಪಿ ಜಿಲ್ಲೆಯ ಮೂಡುಬೆಳ್ಳೆ, ಮಂಗಳೂರು ಮಿಲಾಗ್ರಿಸ್ ಹಾಗೂ ವಿಟ್ಲ ಚರ್ಚ್‌ಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಉನ್ನತ ವ್ಯಾಸಂಗ ಪಡೆಯಲು ರೋಮ್‌ಗೆ ತೆರಳಿ ಅಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಡಾಕ್ಟರೇಟ್ ಪದವಿ ಪಡೆದರು. ಮುಂದಕ್ಕೆ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಬಿಷಪ್ ಆಗಿ ಆಯ್ಕೆಯಾದ ಸಲ್ಡಾನಾ ಅವರು ಮಂಗಳೂರು ಬಿಷಪ್ ಡಾ. ಅಲೋಷಿಯಸ್ ಪೌಲ್ ಡಿಸೋಜ ಅವರ ಜೊತೆ ಮಂಗಳವಾರ ಸಂಜೆ ಐಕಳ ಕಿರೆಂ ಚರ್ಚ್‌ಗೆ ಬೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ತಾವು ಹುಟ್ಟಿ ಬೆಳೆದ ಐಕಳ ಕಜೆಗುರಿ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಪ್ರಾರ್ಥನೆ ಸಲ್ಲಿಸಿದರು.
ಸಲ್ಡಾನಾ ಅವರು ಐಕಳ ಕಜೆಗೊರಿ ಸಮೀಪದ ನೆಲ್ಲಿಗುಡ್ಡೆ ಯಲ್ಲಿನ ಅಣ್ಣ ದಿ. ಸಿರಿಲ್ ಸಲ್ಡಾನಾ ಅವರ ಮನೆಯಲ್ಲಿ ಇಂದು ವಾಸ್ತವ್ಯ ಹೂಡಲಿದ್ದು ನಾಳೆ ವಾಪಸಾಗಲಿದ್ದಾರೆ.

ಬಿಷಪ್ ಆಗಿ ಆಯ್ಕೆಯಾದ ನನಗೆ ತುಂಬಾ ಸಂತೋಷವಾಗುತ್ತಿದೆ, ದೇವರು ನನಗೆ ಈ ಅವಕಾಶ ಕೊಟ್ಟಿದ್ದಾನೆ, ಇಡೀ ಧರ್ಮ ಪ್ರಾಂತ್ಯದಲ್ಲಿ ಎಲ್ಲಾ ಧರ್ಮದವರೊಂದಿಗೆ ಅನ್ಯೋನ್ಯವಾಗಿ ಇರಲು ದೇವರು ಶಕ್ತಿ ಕೊಡಲಿ, ಅಧಿಕಾರ ಸ್ವೀಕರಿಸುವ ದಿನ ನಿಗದಿಯಾಗಿಲ್ಲ, ಮುಂದಿನ ದಿನದಲ್ಲಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲಿದ್ದೇನೆ.

ಡಾ. ಪೀಟರ್ ಪೌಲ್ ಸಲ್ಡಾನಾ

Kinnigoli-04071801 Kinnigoli-04071802

Comments

comments

Comments are closed.