ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಡುಪ ಪ್ರಶಸ್ತಿ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷ ಸಂಸ್ಥಾಪಕ ದಿ. ಕೊ.ಅ.ಉಡುಪ ಸಂಸ್ಮರಣಾರ್ಥ ಪ್ರತೀ ವರ್ಷ ಗೌರವಪೂರ್ವಕವಾಗಿ ನೀಡಲಾಗುವ ಕೊ.ಅ. ಉಡುಪ ಪ್ರಶಸ್ತಿಯನ್ನು ಈ ಬಾರಿ ಸಾಹಿತ್ಯ, ಶಿಕ್ಷಣ, ಸಾಮಾಜಿಕ, ಜಾನಪದ, ಧಾರ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರಿಗೆ ನೀಡಲಾಗುವುದು.
ರಾಮಾಶ್ವಮೇಧದ ರಸತರಂಗಗಳು, ಸ್ನೇಹಸೇತು, ಮುಳಿಯ ತಿಮ್ಮಪ್ಪಯ್ಯ, ತುಳುನಾಡಿನ ಭೂತಾರಾಧನೆಯ ಸಮಗ್ರ ಅಧ್ಯಯನ ಗ್ರಂಥ “ಮಂಗಳ ತಿಮರು” ಮುಂತಾದ ಹಲವು ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಹದಿನೈದರಷ್ಟು ಹಿರಿಯ ಚೇತನಗಳ ಜನ್ಮ ಶತಮಾನೋತ್ಸವ, ಹಲವಾರು ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ಮಾದರಿಯಾಗುವಂತೆ ಸಂಘಟಿಸಿರುತ್ತಾರೆ. ಇವರ ಬರಹಗಳು ಯುಗಪುರುಷ ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತಾ ಬಂದಿವೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿ ಸಹಿತ ಜಿಲ್ಲಾ, ತಾಲೂಕು ಮಟ್ಟದ ಹಲವು ಗೌರವಗಳು ಸಂದಿವೆ.
ಕೊ.ಅ.ಉಡುಪ ಪ್ರಶಸ್ತಿಯನ್ನು ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿರುವ ಕೊ.ಅ.ಉಡುಪ ಸಂಸ್ಮರಣ ಸಮಾರಂಭದಲ್ಲಿ ರೂ. 10,000 ನಗದು, ಗೌರವ ಫಲಕ, ಪ್ರಶಸ್ತಿ ಪತ್ರದೊಂದಿಗೆ ಪ್ರದಾನ ಮಾಡಲಾಗುವುದು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Kinnigoli-04071804

Comments

comments

Comments are closed.

Read previous post:
Kinnigoli-04071803
ಹಿರಿಯ ಸಾಹಿತಿ ಎಚ್.ಶಕುಂತಲಾ ಭಟ್ : ಸನ್ಮಾನ

ಕಿನ್ನಿಗೋಳಿ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಿಶೇಷವಾಗಿ ಗೌರವಿಸಿರುವ ಹಿರಿಯ ಸಾಹಿತಿ ಎಚ್.ಶಕುಂತಲಾ ಭಟ್ ಅವರನ್ನು ಹಳೆಯಂಗಡಿ ಮಹಿಳಾ ಮಂಡಳಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಅಧ್ಯಕ್ಷೆ...

Close