ತೋಕೂರು: ಶೌಚಾಲಯ ಹಸ್ತಾಂತರ

ಕಿನ್ನಿಗೋಳಿ : ಸರಕಾರಿ ಶಾಲೆಗೆ ಸಂಘ ಸಂಸ್ಥೆಗಳು ಆಸರೆಯಾಗಿರಬೇಕು, ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಕ್ಕೆ ಸಹಕಾರ ನೀಡಿದಲ್ಲಿ ಸಮಾಜವು ಸಂಸ್ಥೆಗೆ ಪ್ರೋತ್ಸಾಹ ನೀಡುತ್ತದೆ ಎಂದು ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ನಿವೃತ್ತ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ಕೋಟ್ಯಾನ್ ಹೇಳಿದರು.
ತೋಕೂರು ಯುವಕ ಸಂಘದ ವತಿಯಿಂದ ಮಂಗಳವಾರ ತೋಕೂರು ಹಿಂದೂಸ್ತಾನಿ ಸರಕಾರಿ ಶಾಲೆಗೆ ಶೌಚಾಲಯದ ಕೊಡುಗೆಯನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕ ಸಂಘದ ಅಧ್ಯಕ್ಷ ಹೇಮನಾಥ ಅಮೀನ್ ಮಾತನಾಡಿ ನೆಹರು ಯುವ ಕೇಂದ್ರದ ಸ್ವಚ್ಚ ಭಾರತ ಬೇಸಿಗೆ ತರಬೇತಿ ಶಿಬಿರದ ಪರಿಕಲ್ಪನೆಯ ಯೋಜನೆಯಲ್ಲಿ 28 ಸಾವಿರ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಿಸಲಾಗಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಗುಲ್‌ಶನ್ ತಾಂಭೋರಿ, ಯುವಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಹರಿದಾಸ್ ಭಟ್, ಹಿರಿಯ ಸದಸ್ಯ ಗೋಪಾಲ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071802

Comments

comments

Comments are closed.

Read previous post:
Kinnigoli-04071801
ಕಟೀಲು ಪ್ರೌಢಶಾಲೆ ವಿವಿಧ ಸಂಘಗಳ ಉದ್ಘಾಟನೆ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ, ನೃತ್ಯ, ಕಲಾ, ಎನ್‌ಸಿಸಿ, ಸ್ಕೌಟ್, ಗೈಡ್ಸ್, ಪರಿಸರ, ವಿಜ್ಞಾನ, ಗಣಿತ, ಯೋಗ ಸೇರಿದಂತೆ ವಿವಿಧ ಸಂಘಗಳ...

Close