ಪ್ರಗತಿಪರ ಕೃಷಿಕರನ್ನು ಗೌರವಿಸುವುದು ಶ್ಲಾಘನೀಯ

ಕಿನ್ನಿಗೋಳಿ: ಪ್ರಗತಿಪರ ಕೃಷಿಕರನ್ನು ಗೌರವಿಸುವುದು ಶ್ಲಾಘನೀಯ. ಕೃಷಿ ಇಲಾಖೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾಹಿತಿ ನೀಡುತ್ತಿದೆ ಕೃಷಿಕರು ಇದರ ಸದುಪಯೋಗಪಡಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು
ಕೆಮ್ರಾಲ್ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮೂರು ದಿನಗಳ ಕಾಲ ನಡೆದ ಇಲಾಖೆಗಳ ನಡಿಗೆ ರೈತರ ಕಡೆಗೆ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಪ್ರಶಸ್ತಿ ಪುರಸ್ಕ್ರತ ಕೃಷಿಕರಾದ ಪುರುಷೋತ್ತಮ ಕೋಟ್ಯಾನ್, ಕ್ಯಾನುಟ್ ಅರಾಹ್ಹ ಮತ್ತು ರಾಮ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಕೃಷಿ ಸಂಬಂಧಿಸಿದ ಬೀದಿ ನಾಟಕ ನಡೆಯಿತು.
ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯರಾದ ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೋಳ್ಳೂರು, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್, ಕೆಮ್ರಾಲ್ ಪಂಚಾಯತ್ ಸದಸ್ಯರಾದ ಮಮತಾ ರಮೇಶ್ ಅಮೀನ್, ಪ್ರಮೀಳಾ ಶೆಟ್ಟಿ, ಕೆಮ್ರಾಲ್ ಪಂಚಾಯತ್ ಪಿ.ಡಿ.ಒ ರಮೇಶ್ ರಾಥೋಡ್ ಸಹಾಯಕ ಕೃಷಿ ನಿರ್ದೇಶಕ ವೀಣಾ ಕೆ ಆರ್, ಕೃಷಿ ಅಧಿಕಾರಿ ಅಬ್ಬುಲ್ ಬಶಿರ್, ಸಹಾಯಕ ತೋಟಗಾರಿಕಾ ಅಧಿಕಾರಿ ಯುಗೇಂದ್ರ, ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಹರೀಶ್ ಶಣೈ, ಉಪ ವಲಯ ಅರಣ್ಯಾಧಿಕಾರಿ ಕೆ.ಸಿ ಮ್ಯಾಥ್ಯೂ, ರೇಶ್ಮೆ ಪರೀಕ್ಷಕ ಕೆ.ಜಿ. ಮನೋಹರ್, ರೇಶ್ಮೆ ಇಲಾಖೆ ಮಂಗಳೂರು ನಿರೀಕ್ಷಕ ಎಸ್ ಇಬ್ರಾಹಿಂ, ರಮಿತಾ, ರಕ್ಷಿತಾ, ಸಂಜು ನಿಂಗನ ಗೌಡ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071803

Comments

comments

Comments are closed.

Read previous post:
Kinnigoli-04071801
ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್

ಕಿನ್ನಿಗೋಳಿ: ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಡಾ. ಪೀಟರ್ ಪೌಲ್ ಸಲ್ಡಾನಾ ಆಯ್ಕೆಯಾಗಿದ್ದಾರೆ. ಕಿನ್ನಿಗೋಳಿ ಸಮೀಪದ ಐಕಳ ಕಜೆಗುರಿ ನಿವಾಸಿಯಾಗಿದ್ದ ಇವರು ದಿ. ಲಾಜರಸ್ ಸಲ್ಡಾನಾ ಹಾಗೂ...

Close