ಸಸಿಹಿತ್ಲು : ಗ್ರಾಮದ ಗೌಜಿ ಕ್ರೀಡಾಕೂಟ ಸಮಾರೋಪ

ಕಿನ್ನಿಗೋಳಿ : ಕೃಷಿ ಗದ್ದೆಯು ಕೇವಲ ಭತ್ತದ ಬೆಳೆಗೆ ಸೀಮಿತವಾಗದೆ ಅದರಲ್ಲಿನ ಔಷಧಿ ಅಂಶದ ಬಗ್ಗೆ ತಿಳಿಹೇಳುವ ಕೆಲಸ ಆಗಬೇಕು. ಹಿರಿಯರು ಇಂದಿಗೂ ಗಟ್ಟಮುಟ್ಟಾಗಿರಲು ಕೃಷಿ ಜೀವನವೇ ಅವರ ಆಧಾರವಾಗಿದೆ. ಮುಂದಿನ ಪೀಳಿಗೆಯನ್ನು ಕೃಷಿ ಬದುಕಿಗೆ ಸೆಳೆಯಲು ಕೆಸರುಗದ್ದೆ ಕ್ರೀಡಾ ಕೂಟ ಸಹಕಾರಿಯಾಗಲಿ ಎಂದು ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು.
ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಆಶ್ರಯದಲ್ಲಿ ಅಗ್ಗಿದಕಳಿಯ ಕಂಬಳ ತೋಟದ ಬಾಕಿಮಾರು ಗದ್ದೆಯಲ್ಲಿ ನಡೆದ ನಾಲ್ಕನೇ ವರ್ಷದ ಗ್ರಾಮದ ಗೌಜಿ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ನಮ್ಮೆಲ್ಲರ ನೈಜ ಜೀವನ ಕೃಷಿ ಪರಂಪರೆಯಲ್ಲಿದೆ. ಸಂಘ ಸಂಸ್ಥೆಗಳು ಇದನ್ನು ಉಳಿಸಲು ಹಲವು ರೀತಿಯ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ಇದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಸಹಕಾರ ನೀಡಬೇಕು ಎಂದರು.
ವಿಧಾನ ಪರಿಷತ್‌ನ ಸದಸ್ಯ ಹರೀಶ್‌ಕುಮಾರ್ ಬೆಳ್ತಂಗಡಿ, ಮಾಜಿ ಶಾಸಕ ಮೊಯ್ದಿನ್ ಬಾವ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಯಶವಂತ ಪೂಜಾರಿ ಶುಭ ಹಾರೈಸಿದರು.
ಈ ಸಂದರ್ಭ ಸಾಧಕರ ಹಾಗೂ ಸಹಕಾರದ ನೆಲೆಯಲ್ಲಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೃಷಿಕ ತೋಚೋಡಿ ಶೇಖರ್ ಪೂಜಾರಿ, ಸಮಾಜ ಸೇವಕ ಯೋಗೀಶ್ ಕೋಟ್ಯಾನ್ ಚಿತ್ರಾಪು, ಕಲಾವಿದರಾದ ಸೂರಜ್ ಪಾಂಡೇಶ್ವರ, ಧೀರಜ್ ನೀರುಮಾರ್ಗ, ಸ್ಥಳೀಯರಾದ ಪುರುಷೋತ್ತಮ ಅವರನ್ನು ಸಮ್ಮಾನಿಸಲಾಯಿತು.
ಉದ್ಯಮಿ ಖಾದರ್ ಕೋಡಿಕಲ್, ವಾಸು ಪೂಜಾರಿ ಚಿತ್ರಾಪು, ಹಳೆಯಂಗಡಿ ಗ್ರಾ.ಪಂ. ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಮಾಜಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ಹಮೀದ್ ಸಾಗ್, ಮಹಿಳಾ ವಿಭಾಗದ ಅಧ್ಯಕ್ಷೆ ಶುಭ ಪ್ರೇಮ್‌ನಾಥ್, ಸಹ ಸಂಚಾಲಕರಾದ ಮಧು ಕುಕ್ಯಾನ್, ನಾಗೇಶ್ ಸಾಲ್ಯಾನ್, ರವೀಂದ್ರ ಕೋಟ್ಯಾನ್, ಧನ್‌ರಾಜ್ ಕೋಟ್ಯಾನ್, ಪ್ರೇಮ್‌ನಾಥ್ ಸಾಲ್ಯಾನ್, ಪದ್ಮನಾಭ ಕುಕ್ಯಾನ್, ಪ್ರದೀಪ್ ಎಸ್.ಆರ್.ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಪ್ರಕಾಶ್‌ಕುಮಾರ್ ಬಿ.ಎನ್. ಸ್ವಾಗತಿಸಿದರು, ಸಂಚಾಲಕ ರಮೇಶ್ ಪೂಜಾರಿ ಚೆಳಾರು ಪ್ರಸ್ತಾವಿಸಿದರು, ಕಾರ್ಯದರ್ಶಿ ನರೇಶ್‌ಕುಮಾರ್ ನಿರೂಪಿಸಿದರು.

ಫಲಿತಾಂಶ:
ಕೆಸರುಗದ್ದೆ ಓಟ, ಬಾಲಕರ (ಸಬ್ ಜ್ಯೂನಿಯರ್) ಪ್ರತೀಕ್ (ಪ್ರ), ಸುಜಿತ್ (ದ್ವಿ), ಬಾಲಕಿಯರು : ಐಶ್ವರ್ಯ (ಪ್ರ), ಸುಶ್ಮಿತಾ (ದ್ವಿ),
ಜ್ಯೂನಿಯರ್ ಬಾಲಕರು: ಸದಾಶಿವ (ಪ್ರ), ತರುಣ್ (ದ್ವಿ),
ಬಾಲಕಿಯರು : ಕೃತಿಕಾ (ಪ್ರ), ಗಣ್ಯ (ದ್ವಿ),
ಪುರುಷರು : ಪುನೀತ್ (ಪ್ರ), ಮಂಜುನಾಥ ಕಾಪು (ದ್ವಿ),
ಯುವತಿಯರು : ಖುಶಿ (ಪ್ರ), ಸ್ವಾತಿ ಮುಚ್ಚೂರು (ದ್ವಿ).
ಮಹಿಳೆಯರು : ಪ್ರತಿಭಾ ಸಂದೀಪ್ ಮುಕ್ಕ (ಪ್ರ), ಯಶವಂತಿ ಮತ್ತು ರಾಽಕಾ (ದ್ವಿ).
ಹಿಮ್ಮುಖ ಓಟ : ಸಬ್ ಜ್ಯೂನಿಯರ್ ಬಾಲಕರು : ನಿಧೀಶ್ (ಪ್ರ), ಪ್ರತೀಕ್ (ದ್ವಿ), ಬಾಲಕಿಯರು: ನಿಶ್ಮಿತಾ (ಪ್ರ), ಐಶ್ವರ್ಯ (ದ್ವಿ),
ಜ್ಯೂನಿಯರ್ : ವಿನಾಯಕ (ಪ್ರ), ಮಂಜುನಾಥ (ದ್ವಿ).
ಜ್ಯೂನಿಯರ್ ಬಾಲಕಿಯರು : ಪ್ರಣಮ್ಯ (ಪ್ರ), ಅಪೂರ್ವ (ದ್ವಿ),
ಪುರುಷರು : ಶಶಾಂಕ್ (ಪ್ರ), ಪ್ರಮೋದ್ ಶೆಟ್ಟಿ ಪಂಜ (ದ್ವಿ).
ಯುವತಿಯರು : ಹರ್ಷಲತಾ (ಪ್ರ), ಜೀವಿತಾ (ದ್ವಿ).
ಮಹಿಳೆಯರು: ಯಶವಂತಿ (ಪ್ರ), ಪ್ರತಿಭಾ ಸಂದೀಪ್ ಮುಕ್ಕ (ದ್ವಿ).
ಮೂರು ಕಾಲಿನ ಓಟ : ಬಾಲಕರು : ಅಭೀಷ್ ಮತ್ತು ಪ್ರತೀಕ್ (ಪ್ರ), ಸದಾಶಿವ ಮತ್ತು ವಿನಾಯಕ (ದ್ವಿ).
ಬಾಲಕಿಯರು : ಪ್ರಣಮ್ಯ ಮತ್ತು ಗಣ್ಯ (ಪ್ರ), ಅಕಾಂಕ್ಷ ಮತ್ತು ನಿಶ್ಮಿತಾ (ದ್ವಿ). ಯುವತಿಯರು : ಭವ್ಯ ಮತ್ತು ಸ್ವಾತಿ (ಪ್ರ), ಸಿಂಚನಾ ಮತ್ತು ದಿಶಾ (ದ್ವಿ).
ಪುರುಷರು : ಸನತ್ ಮತ್ತು ಪ್ರಮೋದ್ (ಪ್ರ), ರಾಕೇಶ್ ಮತ್ತು ಶಶಾಂಕ್ (ದ್ವಿ),
ಐದು ಕಾಲಿನ ಓಟ : ಪುರುಷರು : ಸನತ್, ಪ್ರಮೋದ್, ಜಯಂತ್ (ಪ್ರ), ಸುಧೀರ್, ಸಂದೀಪ್, ಸಂದೀಶ್ (ದ್ವಿ),
ಯುವತಿಯರು : ಭವ್ಯ, ಹರ್ಷಿತಾ, ಸ್ವಾತಿ (ಪ್ರ), ಹರ್ಷಿತಾ, ಜವಿತಾ, ಖುಷಿ(ದ್ವಿ). ಮಹಿಳೆಯರು : ಶರಣ್ಯ, ರಾಧಾ, ಅನಿತಾ (ಪ್ರ).
ರಿಲೇ ಓಟ : ಪುರುಷರು : ರಾಕೇಶ್, ಶಶಾಂಕ್, ಪುನೀತ್, ಭಾರತ್ (ಪ್ರ), ಸನತ್, ಪ್ರಮೋದ್, ಪ್ರಸಾದ್, ಸುಧೀರ್ (ದ್ವಿ).
ಯುವತಿಯರು : ಭವ್ಯಾ, ಸ್ವಾತೀ, ಉಷಾ, ಖುಷಿ (ಪ್ರ), ಪ್ರತಿಭಾ, ಹರ್ಷಿತಾ, ರಾಧಾ, ಅನಿತಾ (ದ್ವಿ).
ತಂಬಿಕೆ ಓಟ : ಯುವತಿಯರು : ಸ್ವಾತಿ (ಪ್ರ), ಜೀವಿತಾ (ದ್ವಿ).
ಮಹಿಳೆಯರು : ಯಶವಂತಿ (ಪ್ರ), ರಾಧಾ (ದ್ವಿ).
ಸಂಗೀತ ಕುರ್ಚಿ : ಪುರುಷರು : ಮಂಜುನಾಥ ಕಾಪು (ಪ್ರ), ಸುರೇಂದ್ರ ಪೆರಿಂಜಾ (ದ್ವಿ), ಮಹಿಳೆಯರು ಮಾಲತಿ ಕೋಟ್ಯಾನ್ (ಪ್ರ), ಪ್ರತಿಭಾ ಮುಕ್ಕ (ದ್ವಿ),
ಜಾನಪದ ನೃತ್ಯ : ಎಕ್ಸ್‌ಟ್ರಿಮ್ ಡ್ಯಾನ್ಸ್ ಗ್ರೂಪ್ ಮೂಲ್ಕಿ (ಪ್ರ), ಟಿಂಕ್ಲಿಂಗ್ ಸ್ಟಾರ್ ಸೂರಿಂಜೆ (ದ್ವಿ). ಕಲಾಕುಂಭ ಸುರತ್ಕಲ್ (ತೃ).
ಹಗ್ಗ ಜಗ್ಗಾಟ : ಪುರುಷರು : ಶ್ರಿ ಕಟೀಲು ತಂಡ (ಪ್ರ), ಶ್ರಿರಾಯಿ ಭಕ್ತಾಂಜನೇಯ (ದ್ವಿ), ಮಹಿಳೆಯರು : ಪಡುಕೆರೆ ಫ್ರೇಂಡ್ಸ್ (ಪ್ರ), ಅನಿತಾ ಬಳಗ ಸಸಿಹಿತ್ಲು (ದ್ವಿ).
ನಿಧಿ ಶೋಧ : ಪ್ರಥಮ್.

Kinnigoli-04071806 Kinnigoli-04071807

Comments

comments

Comments are closed.

Read previous post:
Kinnigoli-04071803
ಪ್ರಗತಿಪರ ಕೃಷಿಕರನ್ನು ಗೌರವಿಸುವುದು ಶ್ಲಾಘನೀಯ

ಕಿನ್ನಿಗೋಳಿ: ಪ್ರಗತಿಪರ ಕೃಷಿಕರನ್ನು ಗೌರವಿಸುವುದು ಶ್ಲಾಘನೀಯ. ಕೃಷಿ ಇಲಾಖೆ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಸೂಕ್ತ ಮಾಹಿತಿ ನೀಡುತ್ತಿದೆ ಕೃಷಿಕರು ಇದರ ಸದುಪಯೋಗಪಡಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ...

Close