ಗ್ರಾಮ ಸಭೆಯ ಧ್ವನಿ : ತೋಕೂರು ರಸ್ತೆ ದುರಸ್ಥಿ

ಕಿನ್ನಿಗೋಳಿ : ತೋಕೂರು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲೈಟ್‌ಹೌಸ್ ರಸ್ತೆಯ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾವನೆ ಸಲ್ಲಿಸಿ, ರಸ್ತೆಯನ್ನು ದುರಸ್ಥಿ ಮಾಡಲು ಆಗ್ರಹಿಸಿದ್ದನ್ನು ಸ್ವತಹ ಅಧ್ಯಕ್ಷರು ಹಾಗೂ ಸದಸ್ಯರು ಶ್ರಮದಾನದ ಮೂಲಕ ದುರಸ್ಥಿ ಮಾಡಿದರು.
ಲೈಟ್‌ಹೌಸ್‌ನಿಂದ ಪಕ್ಷಿಕೆರೆ ಸಂಪರ್ಕಿಸುವ ಮಣ್ಣಿನ ರಸ್ತೆಯು ಗುಂಡಿಬಿದ್ದಿದ್ದು, ಅದನ್ನು ಸರಿಪಡಿಸಲು ಗ್ರಾಮ ಸಭೆಯಲ್ಲಿ ಸ್ಥಳೀಯರು ಆಗ್ರಹಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಗ್ರಾಮಸ್ಥರೆಲ್ಲಾ ಸೇರಿ ಶ್ರಮದಾನದ ಮೂಲಕ ದುರಸ್ಥಿ ಮಾಡಲು ಕೇಳಿಕೊಂಡಿದ್ದರು.
ಗ್ರಾಮಸ್ಥರಾದ ಪದ್ಮನಾಭ, ದಿನೇಶ್, ಸುಧೀರ್, ಮನೋಹರ್, ಸುಜಿತ್, ಶಂಕರ್ ಮತ್ತಿತರೊಂದಿಗೆ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ದಿನೇಶ್ ಕುಲಾಲ್ ಸೇರಿಕೊಂಡು ತಾತ್ಕಾಲಿಕವಾಗಿ ಚರಂಡಿಯನ್ನು ರಚಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಹಾಗೂ ಗುಂಡಿಗಳಿಗೆ ಮುಕ್ತಿ ನೀಡುವ ದುರಸ್ಥಿ ಕಾರ್ಯ ನಡೆಸಿದರು.

Kinnigoli-04071808

Comments

comments

Comments are closed.

Read previous post:
Kinnigoli-04071806
ಸಸಿಹಿತ್ಲು : ಗ್ರಾಮದ ಗೌಜಿ ಕ್ರೀಡಾಕೂಟ ಸಮಾರೋಪ

ಕಿನ್ನಿಗೋಳಿ : ಕೃಷಿ ಗದ್ದೆಯು ಕೇವಲ ಭತ್ತದ ಬೆಳೆಗೆ ಸೀಮಿತವಾಗದೆ ಅದರಲ್ಲಿನ ಔಷಧಿ ಅಂಶದ ಬಗ್ಗೆ ತಿಳಿಹೇಳುವ ಕೆಲಸ ಆಗಬೇಕು. ಹಿರಿಯರು ಇಂದಿಗೂ ಗಟ್ಟಮುಟ್ಟಾಗಿರಲು ಕೃಷಿ ಜೀವನವೇ ಅವರ ಆಧಾರವಾಗಿದೆ....

Close