ಐಕಳ ಮಾದಕ ದ್ರವ್ಯ ವಿರೋಧಿ ದಿನಾಚರಣೆ

ಕಿನ್ನಿಗೋಳಿ : ಇಂದಿನ ಯುವಕರು ಮಾದಕ ದ್ರವ್ಯ ವ್ಯಸನಿಗಳಾಗಿ ಬದುಕುವುದು ತುಂಬಾ ದುಃಖಕರ. ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಶಿಕ್ಷಾರ್ಹ ಅಪರಾಧ ಎಂದು ಮುಲ್ಕಿ ಪೊಲೀಸ್ ಠಾಣಾಧಿಕಾರಿ ಶ್ರೀಕಾಂತ್ ಹೇಳಿದರು.
ಕಿನ್ನಿಗೋಳಿ ಐಕಳ ಪೊಂಪೈ ಕಾಲೇಜಿನ ಎನ್.ಸಿ. ಸಿ ,ಎನ್.ಎಸ್. ಎಸ್, ಯೂತ್ ರೆಡ್ ಕ್ರಾಸ್, ದೈಹಿಕ ಶಿಕ್ಷಣ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನ ಘಟಕ ಹಮ್ಮಿಕೊಂಡ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮುಲ್ಕಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶೀತಲ್ ಕುಮಾರ್ ಹಾಗೂ ಗುರುರಾಜ್ ಜಾಧವ್ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.
ಕಾಲೇಜು ಪಿನ್ಸಿಪಾಲ್ ಪ್ರೊ ಜಗದೀಶ್ ಹೊಳ್ಳ ಅಧ್ಯಕ್ಷತೆ ವಹಿಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಯೋಗಿಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.

Kinnigoli-06071802

 

Comments

comments

Comments are closed.

Read previous post:
Kinnigoli-06071801
ಉಮಾನಾಥ ಕೊಟ್ಯಾನ್ ಸನ್ಮಾನ

ಕಿನ್ನಿಗೋಳಿ : ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಶೇತ್ರದ ನೂತನ ಶಾಸಕರಾಗಿ ಅಯ್ಕೆಯಾದ ಉಮಾನಾಥ ಕೊಟ್ಯಾನ್ ಅವರನ್ನು ಮುಲ್ಕಿ...

Close