ಉಮಾನಾಥ ಕೊಟ್ಯಾನ್ ಸನ್ಮಾನ

ಕಿನ್ನಿಗೋಳಿ : ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಶೇತ್ರದ ನೂತನ ಶಾಸಕರಾಗಿ ಅಯ್ಕೆಯಾದ ಉಮಾನಾಥ ಕೊಟ್ಯಾನ್ ಅವರನ್ನು ಮುಲ್ಕಿ ರಾಮಕೃಷ್ಣ ಪೂಂಜ ಧತ್ತಿನಿಧಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಮಾಜಿ ಶಾಸಕ ಕಾಪ್ಟನ್ ಗಣೇಶ್ ಕಾರ್ನಿಕ್, ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ತಿನ ಮಾಜಿ ಸದಸ್ಯ ರಾಜೇಶ್ ಕೆ.ಸಿ., ಮುಲ್ಕಿ ಯುವ ಉದ್ಯಮಿ ಆದಿತ್ಯ ಪೂಂಜ, ನಿಟ್ಟೆ ಇಂಜಿನಿಯರ್ ಕಾಲೇಜು ಮುಖ್ಯ ಗ್ರಂಥಪಾಲಕ ಡಾ. ಯಾಜಿ ದಿವಾಕರ್ ಭಟ್, ಸಂಸ್ಥೆಯ ಹಳೇ ವಿದ್ಯಾರ್ಥಿ ಯೋಗೀಶ್ ಪೂಜಾರಿ, ಸಂಸ್ಥೆಯ ಪ್ರಾಚಾರ್ಯ ವೈ.ಎನ್.ಸಾಲ್ಯಾನ್, ತರಬೇತಿ ಅಧಿಕಾರಿ ಲಕ್ಷ್ಮೀಕಾಂತ, ವಿಶ್ವನಾಥ್ ರಾವ್ ಉದಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06071801

Comments

comments

Comments are closed.

Read previous post:
Kinnigoli-06071804
ಅತ್ತೂರು ಹೊಸಲೊಟ್ಟು ಬಾಬು ಎನ್ ಶೆಟ್ಟಿ

ಕಿನ್ನಿಗೋಳಿ : ಮುಂಬೈ ಉದ್ಯಮಿ ಕಿನ್ನಿಗೋಳಿ ಸಮೀಪದ ಅತ್ತೂರು ಹೊಸಲೊಟ್ಟು ಬಾಬು ಎನ್ ಶೆಟ್ಟಿ (94) ಅಲ್ಪ ಕಾಲದ ಅಸೌಖ್ಯದಿಂದ ಮುಂಬೈಯಲ್ಲಿ ಜುಲೈ 6 ಶುಕ್ರವಾರ ನಿಧನರಾದರು. ಸುಮಾರು 60...

Close