ಅತ್ತೂರು ಹೊಸಲೊಟ್ಟು ಬಾಬು ಎನ್ ಶೆಟ್ಟಿ

ಕಿನ್ನಿಗೋಳಿ : ಮುಂಬೈ ಉದ್ಯಮಿ ಕಿನ್ನಿಗೋಳಿ ಸಮೀಪದ ಅತ್ತೂರು ಹೊಸಲೊಟ್ಟು ಬಾಬು ಎನ್ ಶೆಟ್ಟಿ (94) ಅಲ್ಪ ಕಾಲದ ಅಸೌಖ್ಯದಿಂದ ಮುಂಬೈಯಲ್ಲಿ ಜುಲೈ 6 ಶುಕ್ರವಾರ ನಿಧನರಾದರು. ಸುಮಾರು 60 ವರ್ಷಗಳ ಮೊದಲು ಮುಂಬೈನಲ್ಲಿ ದುರ್ಗಾ ಡೈಸ್ ಮತ್ತು ಕೆಮಿಕಲ್ಸ್ ಉದ್ಯಮವನ್ನು ಆರಂಭಿಸಿದ್ದರು. 1966ರಲ್ಲಿ ಕಟೀಲು ದೇವಸ್ಥಾನದ ತೀರ್ಥಮಂಟಪಕ್ಕೆ ದ್ವಾರ ಮತ್ತು ದಳಿಗೆ ಬೆಳ್ಳಿಯನ್ನು ಹೊದಿಸಿದ್ದು, 2007 ರ ಕಟೀಲು ದೇವಳದ ಬ್ರಹ್ಮಕಲಶೋತ್ಸವದ ಮುಂಬೈ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ವಿವಿಧ ದೈವಸ್ಥಾನ ದೇವಳ ಮತ್ತು ಶಿಕ್ಷಣ ಸಂಸ್ಥೆಗಳ ದಾನಿಯಾಗಿದ್ದರು. ಮೃತರು ಮುಂಬೈ ಬಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ, ಬಜಪೆ ಪಾಪ್ಯುರಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ಟ್ರಸ್ಟಿಯಾಗಿ, ಅತ್ತೂರು ಅರಸುಕುಂಜಿರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಮೊಕ್ತೇಸರರಾಗಿ, ದೇವಳ ಗರ್ಭಗುಡಿಯನ್ನು ನಿರ್ಮಿಸಿಕೊಟ್ಟದ್ದರು. ಅತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದ ದಾನಿಯಾಗಿದ್ದರು.
ಮೃತರಿಗೆ ಪತ್ನಿ ಮೂವರು ಪುತ್ರರು ಒರ್ವ ಪುತ್ರಿಯರು ಇದ್ದಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಲಕ್ಷೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್, ಅತ್ತೂರು ಮಾಗಣೆ ಕೊರ್ದಬ್ಬು ದೈವಸ್ಥಾನದ ಅಧ್ಯಕ್ಷ ಗಣೇಶ್ ಶೆಟ್ಟಿ ಐಕಳ, ಸುರಗಿರಿ ದೇವಳ ಮೊಕ್ತೇಸರ ಸೀತಾರಾಮ ಶೆಟ್ಟಿ ದುರ್ಗಾದಯಾ, ಧನಂಜಯ ಶೆಟ್ಟಿಗಾರ್ ಸಾಗರಿಕಾ, ಅತ್ತೂರು ಅರಸುಕುಂಜಿರಾಯ ದೈವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ರಾಜೇಂದ್ರ ಕೆ ಶೆಟ್ಟಿ ಕುಡ್ತಿಮಾರಗುತ್ತು, ಅಧ್ಯಕ್ಷ ಚರಣ್ ಜೆ ಶೆಟ್ಟಿ ಕೊಜಪಾಡಿ ಬಾಳಿಕೆ, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಅತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಲ್. ಶೆಟ್ಟಿ ಅತ್ತೂರಗುತ್ತು. ಎಳತ್ತೂರು ದೇವಳದ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಶ್ವನಾಥ ಶೆಟ್ಟಿ ಐಕಳ, ಯುಗಪುರುಷದ ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು, ವಿಜಯ ಕಲಾವಿದರು ಕಿನ್ನಿಗೋಳಿ ಇದರ ಅಧ್ಯಕ್ಷ ಶರತ್ ಶೆಟ್ಟಿ ಕಿನ್ನಿಗೋಳಿ, ಕಟೀಲು ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ ಕಟೀಲು, ಶ್ರೀ ಧೂಮಾವತಿ ಮಿತ್ರ ಮಂಡಳಿ ಕಿಲೆಂಜೂರು ಇದರ ಅಧ್ಯಕ್ಷ ಅರುಣ್ ಶೆಟ್ಟಿ ಮಜಲಗುತ್ತು, ಸಜ್ಜನ ಬಂಧುಗಳು ಸಂಸ್ಥೆಯ ಅಧ್ಯಕ್ಷ ರಘುನಾಥ ಕಾಮತ್ ಕೆಂಚನಕೆರೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

Kinnigoli-06071804

Comments

comments

Comments are closed.

Read previous post:
Kinnigoli-06071803
ಕಿಲೆಂಜೂರು : ಮಳೆ ಹಾನಿ

ಕಿನ್ನಿಗೋಳಿ : ಕಿನ್ನಿಗೋಳಿ ಕಳೆದ ವಾರ ಬಾರೀ ಮಳೆಯಿಂದ ನೆರೆ ಅವೃತವಾಗಿ ಕೃಷಿ ನಾಶವಾದ ಕಿಲೆಂಜೂರು ಪ್ರದೇಶಕ್ಕೆ ಮೂಲ್ಕಿ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ...

Close