ತೋಕೂರು : ಮೊಬೈಲ್ ಟೆಕ್ನೀಶಿಯನ್ ಕೋರ್ಸ್

ಕಿನ್ನಿಗೋಳಿ : ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮೊಬೈಲ್‌ನ ಬಳಕೆ ಹಾಗೂ ದುರಸ್ತಿ ಅನಿವಾರ್ಯವೆನಿಸಿದೆ ಹಾಗೂ ಈ ಕೋರ್ಸಿನ ಕಲಿಕೆಯಿಂದ ವಿದ್ಯಾರ್ಥಿಗಳು ಸ್ವ-ಉದ್ಯೋಗವನ್ನು ಮಾಡಿ ಸ್ವಾವಲಂಬಿ ಜೀವನವನ್ನು ನಡೆಸಲು ಉತ್ತಮ ಅವಕಾಶವಾಗಿದೆ ಎಂದು ಎಂ.ಆರ್.ಪೂಂಜಾ ಐಟಿಐಯ ಪ್ರಾಂಶುಪಾಲ ಯಶವಂತ ಎನ್ ಸಾಲಿಯಾನ್ ಹೇಳಿದರು.
ಎಂ.ಆರ್.ಪೂಂಜಾ ಐಟಿಐ ಹಾಗೂ ಎನ್.ಎಂ.ಏ.ಎಂ ಐಟಿ ನಿಟ್ಟೆ ಇವರ ಜಂಟೀ ಸಹಭಾಗಿತ್ವದಲ್ಲಿ 10 ದಿನಗಳ ಕಾಲ ನಡೆದ ಮೊಬೈಲ್ ಟೆಕ್ನೀಶಿಯನ್ ಕೋರ್ಸ್‌ನ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಮತ್ತು ತರಬೇತಿದಾರ ಸಂದೀಪ್ ಆಚಾರ್ಯ ಅವರು ವಿದ್ಯಾರ್ಥಿಗಳು ಉತ್ತಮ ರೀತಿಯ ತರಬೇತಿಯನ್ನು ಪಡೆದು ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಅಭಿನಂದಿಸಿದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಶಿವರಾಮ ದೇವಾಡಿಗ ಪ್ರಸ್ತಾವನೆಗೈದರು.
ತರಬೇತಿ ಅಧಿಕಾರಿ ಲಕ್ಷ್ಮೀಕಾಂತ , ಉದ್ಯೋಗ ಅಧಿಕಾರಿ ರಘುರಾಮ್ ರಾವ್ ಸುರೇಶ್ ಎಸ್ ಕಿರಿಯ ತರಬೇತಿ ಅಧಿಕಾರಿ, ಕಛೇರಿ ಅಧೀಕ್ಷಕ ಉದಯ ಕುಮಾರ್, ವಿದ್ಯಾರ್ಥಿ ಸುಮಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06071801

Comments

comments

Comments are closed.

Read previous post:
Kinnigoli-04071808
ಗ್ರಾಮ ಸಭೆಯ ಧ್ವನಿ : ತೋಕೂರು ರಸ್ತೆ ದುರಸ್ಥಿ

ಕಿನ್ನಿಗೋಳಿ : ತೋಕೂರು ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲೈಟ್‌ಹೌಸ್ ರಸ್ತೆಯ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾವನೆ ಸಲ್ಲಿಸಿ, ರಸ್ತೆಯನ್ನು ದುರಸ್ಥಿ ಮಾಡಲು ಆಗ್ರಹಿಸಿದ್ದನ್ನು ಸ್ವತಹ ಅಧ್ಯಕ್ಷರು ಹಾಗೂ...

Close