ಹಳೆಯಂಗಡಿ : ನೆರೆಗೆ ತುಂಬಿದ ತಗ್ಗು ಪ್ರದೇಶಗಳು

ಕಿನ್ನಿಗೋಳಿ : ಶನಿವಾರ ನಿರಂತರವಾಗಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹಳೆಯಂಗಡಿ ಹಾಗೂ ಪಡುಪಣಂಬೂರು ಪರಿಸರದ ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದೆ.
ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿನ ಕಿರು ಸೇತುವೆ ಬಳಿಯಲ್ಲಿನ ತಗ್ಗು ಪ್ರದೇಶದ ಸುತ್ತಮುತ್ತ ಕೆಲವೊಂದು ಗದ್ದೆಗಳಿಗೆ ಮಣ್ಣು ತುಂಬಿಸಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯದೇ ತೊಂದರೆ ಉಂಟಾಗಿದೆ.
ಹಳೆಯಂಗಡಿ ಮುಖ್ಯ ಜಂಕ್ಷನ್‌ನ ಎರಡೂ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ, ಮಂಗಳೂರಿಗೆ ಪ್ರಯಾಣಿಸುವ ಬಸ್ ಪ್ರಯಾಣಿಕರ ತಂಗುದಾಣದ ಬಳಿ ಸೂಕ್ತವಾದ ಚರಂಡಿ ಇಲ್ಲದೆ ಸುತ್ತಮುತ್ತ ರಸ್ತೆಯಲ್ಲಿಯೇ ಹರಿಯುತ್ತಿದೆ.
ತೋಕೂರು, ಇಂದಿರಾನಗರ, ಕದಿಕೆ, ಪಕ್ಷಿಕೆರೆ ರಸ್ತೆ ಮುಂತಾದ ಕಡೆಗಳಲ್ಲಿಯು ಸಮಸ್ಯೆ ಹೆಚ್ಚಾಗಿದೆ. ನಂದಿನಿ ನದಿ ತೀರದ ಪಾವಂಜೆ ಸೇತುವೆ ಬಳಿಯ ಕೆಲವೊಂದು ಪ್ರದೇಶಗಳಲ್ಲಿ ಖಾಸಗಿ ಜಮೀನಿನ ಮಣ್ಣೆಲ್ಲಾ ಚರಂಡಿಯಲ್ಲಿ ತುಂಬಿದ್ದು, ಇದರಿಂದ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತಿದೆ.

Kinnigoli-07071807 Kinnigoli-07071808

Comments

comments

Comments are closed.