ಕಿನ್ನಿಗೋಳಿ ಪರಿಸರದಲ್ಲೆ ನೆರೆ ಹಾವಳಿ

ಕಿನ್ನಿಗೋಳಿ : ಶನಿವಾರ ಸುರಿದ ಬಾರೀ ಮಳೆಗೆ ಶಾಂಭವಿ ನದಿ ಉಕ್ಕಿ ಹರಿದು ಐಕಳ ಗ್ರಾಮ ಪಂಚಾಯಿತಿ ಮತ್ತು ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವಾರು ಎಕೆರೆ ಭತ್ತ ನಾಟಿ ಮಾಡಿದ ಪ್ರದೇಶ ಜಲಾವೃತವಾಗಿದೆ.
ರಾಜ್ಯ ಹೆದ್ದಾರಿಯ ಸಂಕಲಕರಿಯ ಪಟ್ಟೆ ಕ್ರಾಸ್ ಮುಖ್ಯ ರಸ್ತೆಯಿಂದ ಒಳಗಿನ ಪಟ್ಟೆ ಜಾರಾಂದಾಯ ದೈವಸ್ಥಾನ ಹಾಗೂ ಶುಂಠಿಪಾಡಿ ಗೆ ಹೋಗುವ ರಸ್ತೆ ಮುಳುಗಡೆಯಾಗಿದೆ. ನವೀನ್ ಮತ್ತು ಸುರೇಶ್ ಮಾಲಕತ್ವದ ಬೇಕರಿ ತಯಾರಿಕಾ ಘಟಕದ ಸಿಹಿತಿಂಡಿಗಳು ಬ್ರೆಡ್‌ಗಳು ಹಾಗೂ 2 ಜನರೇಟರ್, ದಿನೇಶ್ ಹಾಗೂ ನಂದೇಶ್ ಅವರ ಅಂಗಡಿಗಳು ಮಳುಗಡೆಯಾಗಿದೆ. ಪಟ್ಟೆ ಪ್ರದೇಶದ ಸುಮಾರು ೪೫ ಎಕರೆ ಭೂಮಿ ನೆರೆ ಹಾವಳಿಯಿಂದ ಹಾನಿಗೀಡಾಗಿದೆ.
ಐಕಳ ಮುಂಚಿ ಗುಡ್ಡೆ ಯಲ್ಲಿ ಗುಡ್ಡೆ ಜರಿದು ಸುಶೀಲ ಅವರ ಮೆನೆಗೆ ಬಿದ್ದು ಹಾನಿಯಾಗಿದೆ.
ಉಳೆಪಾಡಿಯಲ್ಲಿ ಉಮಾಮಹೇಶ್ವರಿ ದೇವಳದ ಬಳಿಯ ರತ್ನಾಕರ ಶೆಟ್ಟಿ ಹಾಗೂ ಸುಧಾಕರ ಶೆಟ್ಟಿ ಮನೆಗಳು ಜಲಾವೃತವಾಗಿದ್ದು ಎರಡು ಕುಟುಂಬದವರನ್ನು ಮುಲ್ಕಿಯ ಮಂತ್ರ ಸರ್ಪಿಂಗ್ ಕ್ಲಬ್‌ನ ದೋಣಿಯ ಮೂಲಕ ಕ್ಲಬ್‌ನ ಸದಸ್ಯರು ಹಾಗೂ ಸ್ಥಳೀಯರು ಸ್ಥಳಾಂತರ ಮಾಡಿದರು.
ಕಟೀಲು ನಂದಿನಿ ನದಿ ಉಕ್ಕಿ ಹರಿದುದರಿಂದ ಜಲಕದಕಟ್ಟೆ ಹಾಗೂ ದೇವರಗುಡ್ಡೆ ರಸ್ತೆ ಸಂಚಾರ, ಅತ್ತೂರು ಬೈಲು ಮಹಾ ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡಿದೆ. ಅತ್ತೂರು ಬೈಲು ಗಣಪತಿ ಉಡುಪ, ಉಮೇಶ್ ದೇವಾಡಿಗ, ಜನಾರ್ದನ ಉಡುಪ, ರವಿ ದೇವಾಡಿಗ ಅವರ ಮನೆ ಜಲಾವೃತಗೊಂಡಿದೆ.
ಪಂಜ, ಕಿಲೆಂಜೂರು, ಮಿತ್ತಬೈಲು, ಮಲ್ಲಿಗೆಯಂಗಡಿ, ಕೊಡೆತ್ತೂರು, ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶ ಜಲಾವೃತಗೊಂಡಿದೆ
ಪಂಜ ಕೊಯಿಕುಡೆ, ಉಲ್ಯ, ಮೊಗಪಾಡಿ, ಬೈಲಗುತ್ತು, ಕುದ್ರು ಪ್ರದೇಶಗಳು ಜಲಾವೃತ ಗೊಂಡು ಸುಮಾರು ೭೦ ಮನೆಗಳ ಜಲವೃತವಾಗಿದೆ. ಬೈಲಗುತ್ತು ಸತೀಶ್ ಶೆಟ್ಟಿಯವರು ತಮ್ಮ ಸ್ವಂತ ದೋಣಿಯಲ್ಲಿ ಮತ್ತಿತರರ ಸಹಕಾರದೊಂದಿಗೆ ಜನರನ್ನು ಸ್ಥಳಾಂತರಿಸಿ ಸಹಕರಿಸಿದರು. ಶೋಭಾ ಸೀತಾರಾಮ ಪೂಜಾರಿ, ಗಂಗಾ ಪೂಜಾರಿ ಲಕ್ಷಣ ಪೂಜಾರಿ, ರಾಜು ಪೂಜಾರಿ ಅವರ ಮನೆ ಜಲಾವೃತಗೊಂಡಿದೆ.
ಕಿಲೆಂಜೂರು ಪ್ರದೇಶದಲ್ಲಿಯೂ ನೆರೆ ಆವರಿಸಿದ್ದು, ರಾಘು ಕರ್ಕೇರ, ದೇವಕಿ ಕಡಪು, ಕೋಟಿ ದೇವಾಡಿಗ, ಬಾಬು ದೇವಾಡಿಗ, ಮೋನಪ್ಪ ಮೂಲ್ಯ, ಪುರಂದರ ದೇವಾಡಿಗ ಗೋವರ್ದನ ಮೂಲ್ಯ, ಗೋವಿಂದ ಪೂಜಾರಿ ವೆಂಕಪ್ಪ ಪೂಜಾರಿ ಅವರ ಮನೆ ಜಲಾವೃತವಾಗಿದೆ. ಕಿಲೆಂಜೂರಿನಲ್ಲಿ ಅಗ್ನಿಶಾಮಕ ದಳದವರು ದೋಣಿ ಮೂಲಕ ಜನರನ್ನು ಸ್ಥಳಾಂತರಿಸಿದರು. ಕಿಲೆಂಜೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಬಳಕುಂಜೆಯಲ್ಲಿ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ.
ಜಲಾವೃತಗೊಂಡ ಪ್ರದೇಶಗಳಿಗೆ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮೂಲ್ಕಿ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೂಡ್ಕರ್, ಗ್ರಾಮಕರಣಿಕ ಪ್ರದೀಪ್ ಶಣೈ, ಕಿರಣ್, ಸಂತೋಷ್, ಮಂಜುನಾಥ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ರಶ್ಮೀ ಆಚಾರ್ಯ, ಶುಭಲತಾ ಶೆಟ್ಟಿ. ಶರತ್ ಕುಬೆವೂರು, ಐಕಳ ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ, ಬಳ್ಕುಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್ ಪುತ್ರನ್, ಕೆಮ್ರಾಲ್ ನಾಗೇಶ್ ಬೋಳ್ಳೂರು, ಕಟೀಲು ಗ್ರಾಪಂ. ಗೀತಾ ಪೂಜಾರ್ತಿ, ಕಿರಣ್ ಕುಮಾರ್ ಶೆಟ್ಟಿ, ಜನಾರ್ದನ ಕಿಲೆಂಜೂರು, ತಿಲಕ್, ಸುಧಾಕರ ಸಾಲ್ಯಾನ್ ಮತ್ತಿತರರು ಭೇಟಿ ನೀಡಿದರು.

Kinnigoli-07071801 Kinnigoli-07071802 Kinnigoli-07071803 Kinnigoli-07071804 Kinnigoli-07071805 Kinnigoli-07071806

Comments

comments

Comments are closed.