ತೋಕೂರು: ವನಮಹೋತ್ಸವ, ಸಸಿ ವಿತರಣೆ

ಕಿನ್ನಿಗೋಳಿ : ಸ್ವಚ್ಚತೆಯಲ್ಲಿ ಪಡುಪಣಂಬೂರಿನ ತೋಕೂರಿನ ಗ್ರಾಮ ಮಾದರಿಯಾಗಿದೆ. ಸಂಘ ಸಂಸ್ಥೆಗಳು ಪರಸ್ಪರ ಕೈ ಜೋಡಿಸಿದಲ್ಲಿ ಸಮಾಜದ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದು ಬೈಕಂಪಾಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ ಹೇಳಿದರು.
ತೋಕೂರು ಶ್ರಿ ಸುಬ್ರಹ್ಮಣ್ಯ ಮಾಹಗಣಪತಿ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳೂರಿನ ನೆಹರು ಯುವ ಕೇಂದ್ರದ ಸಹಕಾರದಲ್ಲಿ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಬೈಕಂಪಾಡಿ ರೋಟರಿ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಸ್ವಚ್ಚ ಭಾರತ ಬೇಸಿಗೆ ಶಿಬಿರ ೮ನೇ ಸಪ್ತಾಹದ ಕಾರ್ಯಕ್ರಮ ಹಾಗೂ ಇತ್ತೀಚೆಗೆ ನಡೆದ ವನಮಹೋತ್ಸವ ಮತ್ತು ಉಚಿತ ಸಸಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸ್‌ಪಾಲ್ ವಿಷ್ಣುಮೂರ್ತಿ ಅಧ್ಯಕ್ಷತೆ ವಹಿಸಿದರು.
ಶ್ರೀಕಾಂತ್ ಶೆಟ್ಟಿ ಬಾಳ ದಂಪತಿ ಗಿಡ ನೆಟ್ಟು ವನಮಹೋತ್ಸವ ಆಚರಿಸಿದರು. ಸಸಿಯನ್ನು ಕೃಷಿಕರಾದ ಸುಂದರ ಭಂಡಾರಿ ಹಾಗೂ ಮೂಡುಮನೆ ವೆಂಕಪ್ಪ ಶೆಟ್ಟಿ ಅವರಿಗೆ ಉಚಿತವಾಗಿ ವಿತರಣೆ ಮಾಡಿ ಸಾಮೂಹಿಕ ವಿತರಣೆಗೆ ಚಾಲನೆ ನೀಡಲಾಯಿತು. ಸಂಪಿಗೆ, ರಕ್ತ ಚಂದನ, ಸಾಗುವಾನಿ, ನೇರಳೆ ಮತ್ತಿತರ ಗಿಡಗಳನ್ನು ವಿತರಿಸಲಾಯಿತು.
ಈ ಸಂದರ್ಭ ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ನೆಹರು ಯುವ ಕೇಂದ್ರದ ಅಫ್ಸಾನ, ರೋಟರಿಯ ವನಮಹೋತ್ಸವದ ನಿರ್ದೇಶಕ ಅಶೋಕ್ ಎನ್., ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಸಂತೋಷ್‌ಕುಮಾರ್, ಪುಷ್ಪಾವತಿ, ಹೇಮನಾಥ್ ಅಮೀನ್, ದಿನೇಶ್ ಕುಲಾಲ್, ಮಂಜುಳಾ, ಪಿಡಿಒ ಅನಿತಾ ಕ್ಯಾಥರಿನ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಸಿಬಂದಿ ವರ್ಗ, ಸರಕಾರಿ ಹಿಂದೂಸ್ಥಾನಿ ಶಾಲಾ ಮುಖ್ಯ ಶಿಕ್ಷಕಿ ಗುಲ್ಷನ್ ತಂಬೋಲಿ, ಗ್ರಾಮದ ಹಿರಿಯರಾದ ಪುರುಷೋತ್ತಮ ಆಚಾರ್ಯ, ಸುಬ್ರಹ್ಮಣ್ಯ ರಾವ್, ಕ್ಲಬ್ ಉಪಾಧ್ಯಕ್ಷ ಮುಖೇಶ್ ಸುವರ್ಣ, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಧಿಕಾರಿ ದೀಪಕ್ ಸುವರ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕ್ಲಬ್ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಸ್ವಾಗತಿಸಿದರು, ಸಂಪತ್ ವಂದಿಸಿದರು, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-07071805

Comments

comments

Comments are closed.

Read previous post:
Kinnigoli-07071804
ತೋಕೂರು : ಶಾಲಾ ಬ್ಯಾಗ್ ,ವಿವಿಧ ಪರಿಕರ ವಿತರಣೆ

ಕಿನ್ನಿಗೋಳಿ : ತೋಕೂರು ಶ್ರೀ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರ 10ನೇ ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಲದ ಜಂಟಿ ಸಂಯೋಜನೆಯಲ್ಲಿ ಅಂಗನವಾಡಿ ಮಕ್ಕಳಿಗೆ ಶಾಲಾ ಬ್ಯಾಗ್...

Close