ಅತ್ತೂರು ಬಾಬು ಶೆಟ್ಟಿ : ಶ್ರದ್ದಾಂಜಲಿ ಸಭೆ

ಕಿನ್ನಿಗೋಳಿ : ಅತ್ತೂರು ಬಾಬು ಶೆಟ್ಟಿ ಅವರು ನೇರ ನಡೆ ನುಡಿ ಹಾಗೂ ತಪ್ಪನ್ನು ಒಪ್ಪಿಕೊಳ್ಳುವ ಸ್ವಭಾವ ಅವರಲ್ಲಿತ್ತು. ಕಟೀಲು ದೇವಳದಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮದಲ್ಲಿ ಅವರು ಬಾಗವಹಿಸುತ್ತಿದ್ದರು. 1964 ರಲ್ಲಿ ಕಟೀಲು ದೇವಳದ ಗರ್ಭಗುಡಿಯ ಬಾಗಿಲಿಗೆ ಬೆಳ್ಳಿಯ ಹೊದಿಕೆಯನ್ನು ಮಾಡಿಕೊಟ್ಟಿದ್ದಾರೆ ಎಂದು ಕಟೀಲು ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು
ಸುರಗಿರಿ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ಅತ್ತೂರು ಹೊಸಲೊಟ್ಟು ಬಾಬು ಶೆಟ್ಟರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಶಿಬರೂರು ವೇದವ್ಯಾಸ ತಂತ್ರಿ ಮಾತನಾಡಿ ಸುರಗಿರಿ ಮಹಾಲಿಂಗೇಶ್ವರ ದೇವಳದ ಎರಡು ಬ್ರಹ್ಮಕಲಶೋತ್ಸವದಲ್ಲಿ ತಮ್ಮನ್ನು ತಾವು ತೊಡಗಿಸಿ ದೇವಳದ ಬಗ್ಗೆ ವಿಶೇಷ ಒಲವನ್ನು ಇಟ್ಟುಕೊಂಡವರಾಗಿದ್ದರು ಎಂದರು.
ಕಟೀಲು ಪದವಿ ಕಾಲೇಜು ಪ್ರಾಚಾರ್ಯ ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ ಬಾಬು ಶೆಟ್ಟರಿಂದ ಅತ್ತೂರಿನ ಹೆಸರು ಬಹಳ ಪ್ರಸಿದ್ದಿಯಾಯಿತು, ಹಿಂದೆ ಮುಂಬೈಗೆ ಕಾಲಿಡುವ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದರು, ಯುವಕರು ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯತ್ ನ್ನು ರೂಪಿಸಬೇಕು ಎಂಬ ದೃಷ್ಟಿಯಿಂದ ಶಿಕ್ಷಣ ಸಂಸ್ಥೆಗಳಿಗೆ ಅನೇಕ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಅತ್ತೂರು ಭಂಡಾರ ಮನೆ ಶಂಭು ಮುಕಾಲ್ದಿ ಮಾತನಾಡಿ ಕಟೀಲು ದುರ್ಗೆಯ ಆಶೀರ್ವಾದದಿಂದ ತಮ್ಮ ಬದುಕಿನಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ ಎಂದರು. ಈ ಸಂದರ್ಭ ದೇವಳದ ಮೊಕ್ತೇಸರರಾದ ಸೀತಾರಾಮ ಶೆಟ್ಟಿ ದುರ್ಗಾದಯ, ಅನಂತರಾಮ ಭಟ್, ಧನಂಜಯ ಶೆಟ್ಟಿಗಾರ್, ವಿಶ್ವೇಶ ಭಟ್, ಪುರುಶೋತ್ತಮ ಶೆಟ್ಟಿ ಕೊಡೆತ್ತೂರು, ಬಾಲದಿತ್ಯ ಆಳ್ವ, ಶಂಭು ಶೆಟ್ಟಿ ಮೂಡ್ರಗುತ್ತು, ಮಹಾಬಲ ಶೆಟ್ಟಿ ಪಡುಮನೆ, ಹರಿಶ್ಚಂದ್ರ ಶೆಟ್ಟಿ, ಜಗ್ಗು ಬಿ ಶೆಟ್ಟಿ, ಸುನೀಲ್ ಭಂಡಾರಿ ಕೆಮ್ರಾಲ್ ಗುತ್ತು, ತಿಮ್ಮಪ್ಪ ಶೆಟ್ಟಿ ಅತ್ತೂರುಗುತ್ತು, ರಮಾನಾಥ ಶೆಟ್ಟಿ, ಲವ ಶೆಟ್ಟಿ, ಜಯರಾಮ ಆಚಾರ್ಯ ಕೊಯಿಕುಡೆ, ರಾಮಚಂದ್ರ ಬಲ್ಲಾಳ್, ಪ್ರಕಾಶ್ ಶೆಟ್ಟಿ, ಧೀರಜ್ ಶೆಟ್ಟಿ ಮಮ್ಮೆಟ್ಟು, ನಿರ್ಮಲಾ ವಿ ನಾಯಕ್, ಸಚಿನ್ ಶೆಟ್ಟಿ, ವಿಜಯ ಎಲ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣರಾಜ್ ಭಟ್ ಕೋಡು ಕಾರ್ಯಕ್ರಮ ನಿರೂಪಿದರು.

Kinnigoli-13071801

Comments

comments

Comments are closed.

Read previous post:
Kinnigoli-070718010
ಮೂಲ್ಕಿ ಬಪ್ಪನಾಡು ದೇವಳಕ್ಕೆ ನೆರೆ ನೀರು

ಕಿನ್ನಿಗೋಳಿ : ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಾನುವಾರ ಸಾರ್ವಜನಿಕರಿಂದ ಸೀಯಾಳಾಭಿಶೇಕ ಸಂಕಲ್ಪಿಸಿರುವುದಕ್ಕೆ ಪೂರ್ವಭಾವಿಯಾಗಿ ಶನಿವಾರ ಮಳೆ ಸುರಿದು ದೇವಳ ಜಲಾವೃತಗೊಂಡಿದೆ ಬಪ್ಪನಾಡು ದೇವಳದ ಪೂರ್ವಭಾಗದ ಗದ್ದೆಗಳಲ್ಲಿ ನೀರು...

Close