ಶಿಕ್ಷಣದಲ್ಲಿ ಮಾನಸಿಕ ಸ್ಥಿರತೆ ಅಗತ್ಯ

ಕಿನ್ನಿಗೋಳಿ : ಶಿಕ್ಷಣದಲ್ಲಿ ಮಾನಸಿಕ ಸ್ಥಿರತೆಯ ಅಗತ್ಯವಿದೆ. ಕಲಿಯುವಾಗ ಉದ್ವೇಗಕ್ಕೆ ಒಳಗಾಗದೇ ಶಾಂತ ಚಿತ್ತರಾಗಿ ತಮ್ಮ ಸಂಶಯಗಳನ್ನು ಶಿಕ್ಷಕರಲ್ಲಿ ಪರಿಹರಿಸಿಕೊಳ್ಳಿ, ನಮ್ಮಲ್ಲಿರುವ ಕೆಲವು ತಪ್ಪು ಕಲ್ಪನೆಗಳು ಹಾಗೂ ಮಾನಸಿಕ ಸ್ವಾಸ್ಥ್ಯದ ರಕ್ಷಣಾ ಕ್ರಮಗಳನ್ನು ಕೈಗೊಳ್ಳಿರಿ ಎಂದು ಶಿಕ್ಷಕಿ ಜೇಷ್ಠಲಕ್ಷ್ಮೀ ಕರೆ ನೀಡಿದರು.
ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಣಿಜ್ಯ ಶಾಸ್ತ್ರ ವಿಭಾಗ, ರೆಡ್‌ಕ್ರಾಸ್, ರೇಂಜರ್ಸ್, ರೋವರ್ಸ್ ಹಾಗೂ ಎನ್‌ಎಸ್‌ಎಸ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಬಿ.ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸಂತೋಷ್ ಪಿಂಟೊ, ಉಪನ್ಯಾಸಕರಾದ ಶ್ರೀಧರ್ ಕೆ., ರೋಶ್ನಿ ಯಶವಂತ್, ಅವಿನಾಶ್, ರಾಹುಲ್‌ಕುಮಾರ್, ಪ್ರಸನ್ನಕುಮಾರ್, ಮಂಜುಳ ಮಲ್ಯ, ಅಶ್ವಿನ್ ಮೆಂಡೊನ್ಸ, ರೇಂಜರ್ಸ್ ಘಟಕದ ಸಂಯೋಜಕ ಅಕ್ಷತಾ ಸುವರ್ಣ, ಪ್ರಜ್ಞಾ, ರಶ್ಮಿತಾ ಎಚ್. ಉಪಸ್ಥಿತರಿದ್ದರು.

Kinnigoli-14071806

Comments

comments

Comments are closed.

Read previous post:
Kinnigoli-14071805
ಸಸಿಹಿತ್ಲು : ಶಾಲಾ ವಠಾರದಲ್ಲಿ ಸ್ವಚ್ಚತಾ ಕಾರ್ಯ

ಕಿನ್ನಿಗೋಳಿ : ಮಂಗಳೂರು ನೆಹರು ಯುವ ಕೇಂದ, ಸಸಿಹಿತ್ಲು ಹಳೇ ವಿದ್ಯಾರ್ಥಿ ಸಂಘ, ನವೋದಯ ಮಹಿಳಾ ಮಂಡಲ ಹಾಗೂ ಸಸಿಹಿತ್ಲು ಯುವಕ ಮತ್ತು ಯುವತಿ ಮಂಡಲದ ಸಂಯುಕ್ತ ಆಶ್ರಯದಲ್ಲಿ...

Close