ಸಾಂಘಿಕ ಪ್ರಯತ್ನ ಜನಪರ ಸೇವೆ -ಮಾದರಿ

ಕಿನ್ನಿಗೋಳಿ : ಸಾಂಘಿಕ ಪ್ರಯತ್ನ ಹಾಗೂ ಜನಪರ ಸೇವೆ ಮೂಲಕ ಅಂತರಾಷ್ಟ್ರೀಯ ಸಂಸ್ಥೆಗಳು ಮಾದರಿಯಾಗಬೇಕು ಎಂದು ರೋಟರಿ ಜಿಲ್ಲೆ 3181 ರ 2019-20 ನೇ ಸಾಲಿನ ನಿಯೋಜಿತ ಗವರ್ನರ್ ಜೋಸೆಫ್ ಮ್ಯಾಥ್ಯು ಹೇಳಿದರು.
ಕಿನ್ನಿಗೋಳಿ ರೋಟರಿ ರಜತ ಭವನ ಕಿನ್ನಿಗೋಳಿ ರೋಟರಿ ಕ್ಲಬ್ 2018-19 ನೇ ಸಾಲಿನ ನೂತನ ಅಧ್ಯಕ್ಷ ಕೆ. ಬಿ. ಸುರೇಶ್ ಹಾಗೂ ತಂಡಕ್ಕೆ ಗುರುವಾರ ಪದಗ್ರಹಣ ನಡೆಸಿ ಮಾತನಾಡಿದರು.
ರೋಟರಿ ಜಿಲ್ಲೆ 3181 ವಲಯ 1 ರ ಉಪರಾಜ್ಯಪಾಲ ಮಹ್ಮಮದ್ ಆಸ್ಲಾಂ ಕಿನ್ನಿಗೋಳಿ ರೋಟರಿ ಮುಖವಾಣಿ ಸಿಂಚನ ಬಿಡುಗಡೆಗೊಳಿಸಿ ಮಾತನಾಡಿ ಸಮಾಜ ಮುಖಿ ಕೆಲಸ ಕಾರ್ಯಗಳನ್ನು ಮಾಡಿದಾಗ ಜನರು ಗುರುತಿಸಿ ಪ್ರೋತ್ಸಾಹಿಸುತ್ತರೆ ಎಂದು ಹೇಳಿದರು.
ವಲಯ 1 ವಲಯ ಸೇನಾನಿ ಜೋನ್ ಜೆರಾಲ್ಡ್ ಮಿನೇಜಸ್ ಶುಭಹಾರೈಸಿದರು.
ಸೇವಾ ಯೋಜನೆಯಡಿಯಲ್ಲಿ ಐದು ಅಂಗನವಾಡಿಗಳನ್ನು ದತ್ತು ಸ್ವೀಕಾರ ಮಾಡಲಾಯಿತು. ಕಿನ್ನಿಗೋಳಿ ರೋಟರಿ ಪ್ರರ್ವತಿತ 12 ಇಂಟರ‍್ಯಾಕ್ಟ್ ಸಂಸ್ಥೆಗಳ ಪ್ರತಿಭಾವಂತ ವಿದ್ಯಾರ್ಥಿಗಳಾದ ಕೃಪಾ ಸುವರ್ಣ, ಶಿಫಾಲಿ, ಸೌರವ್, ದೀಕ್ಷಿತಾ, ಅಭಿಷೇಕ್, ಫಾತಿಮಾ, ಹಮೀಲ್ ಉಜ್ವಲ್ ವಾಸ್, ತೇಜಸ್ವಿನಿ, ಶೋಭಾ, ಅನನ್ಯ, ರೋಟರಿ ಶಾಲೆಯ ಅಂಕಿತಾ ಭಟ್ , ದಾಕ್ಷಾಯಣಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿಲಿಯಂ ಕಾರ್ಡೋಜ, ಹರೀಶ್ ಶೆಟ್ಟಿ, ವಲೇರಿಯನ್ ತಾವ್ರೋ, ದೇವಿಪ್ರಸಾದ್ ಶೆಟ್ಟಿ ಅವರನ್ನು ಹೊಸ ಸದಸ್ಯರನ್ನಗಿ ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು.
ಕಿನ್ನಿಗೋಳಿ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷೆ ಸೆವ್ರಿನ್ ಲೋಬೋ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸಂತೋಷ್ ಕುಮಾರ್ ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಸಾಯಿನಾಥ ಶೆಟ್ಟಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-14071801 Kinnigoli-14071802 Kinnigoli-14071803 Kinnigoli-14071804

Comments

comments

Comments are closed.

Read previous post:
Kinnigoli-13071801
ಅತ್ತೂರು ಬಾಬು ಶೆಟ್ಟಿ : ಶ್ರದ್ದಾಂಜಲಿ ಸಭೆ

ಕಿನ್ನಿಗೋಳಿ : ಅತ್ತೂರು ಬಾಬು ಶೆಟ್ಟಿ ಅವರು ನೇರ ನಡೆ ನುಡಿ ಹಾಗೂ ತಪ್ಪನ್ನು ಒಪ್ಪಿಕೊಳ್ಳುವ ಸ್ವಭಾವ ಅವರಲ್ಲಿತ್ತು. ಕಟೀಲು ದೇವಳದಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮದಲ್ಲಿ ಅವರು ಬಾಗವಹಿಸುತ್ತಿದ್ದರು. 1964...

Close