ಸಸಿಹಿತ್ಲು ನದಿ ಕೊರೆತಕ್ಕೆ ಶೀಘ್ರ ಪರಿಹಾರ

ಕಿನ್ನಿಗೋಳಿ : ಸಸಿಹಿತ್ಲು ಮುಂಡ ಬೀಚ್ ನಲ್ಲಿ ಕಡಲ್ ಕೊರೆತ ಹೆಚ್ಚಾಗಿದು ಸಂಬಂದಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಇದಕ್ಕೆ ಶಾಶ್ವತ ಪರಿಹಾರ ನಡೆಸಲಾಗುದು ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಸಸಿಹಿತ್ಲು ಬೀಚ್ ಪ್ರದೇಶಕ್ಕೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅಳವೆಯನ್ನು ಉಳಿಸಲು ಸ್ಥಳೀಯ ಅನುಭವಿ ಮೀನುಗಾರರನ್ನು, ಗ್ರಾಮಸ್ಥರ ಸಮ್ಮುಖದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸುವ ಚಿಂತನೆ ಇದೆ. ಸಸಿಹಿತ್ಲು ಪ್ರದೇಶ ಪ್ರವಾಸೋದ್ಯಮಕ್ಕೆ ಬೇಕಾದ ಅವಶ್ಯಕತೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದರು.
ಸಸಿಹಿತ್ಲುವಿನ ಪ್ರದೇಶದಲ್ಲಿನ ಕೆಲವು ನಿವಾಸಿಗಳ ಹಕ್ಕು ಪತ್ರದ ಸಮಸ್ಯೆ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆದು, ಸರಕಾರದ ನಿಯಮಾನುಸಾರ ಹಕ್ಕುಪತ್ರಗಳ ವಿತರಣೆ ಹಾಗೂ ಸಮುದ್ರ ತೀರದ ಅಗತ್ಯತೆಗಳನ್ನು ಪೊರೈಸುವ ಪ್ರಯತ್ನ ಮಾಡುತ್ತೇನೆ. ಸ್ಥಳೀಯರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು, ಸಸಿಹಿತ್ಲು ಪ್ರದೇಶದಲ್ಲಿ ಮುಖ್ಯವಾಗಿ ಸರ್ಫಿಂಗ್ ನಡೆಸುವ ಬದಲು ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ಸಿಗಲಿ. ಬೀಚ್ ಅಭಿವೃದ್ಧಿ ಸಮಿತಿಯನ್ನು ಅಧಿಕೃತಗೊಳಿಸಿ. ಸಸಿಹಿತ್ಲುವಿನಲ್ಲಿ ಮುಖ್ಯವಾಗಿ ಮೀನುಗಾರಿಕಾ ವೃತ್ತಿಗೆ ಸಂಬಂಧಿತ ಯೋಜನೆ ರೂಪಿಸಲಿ, ಮೀನುಗಾರಿಕಾ ಜೆಟ್ಟಿಯಂತಹ ವಲಯವನ್ನು ನಿರ್ಮಿಸಲು ಪ್ರಯತ್ನ ನಡೆಸಬೇಕು ಎಂದು ಹೇಳಿಕೊಂಡರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಚಿತ್ರಾ ಸುಕೇಶ್, ಅಶೋಕ್ ಬಂಗೇರ,
ಸ್ಥಳೀಯರಾದ ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಾಸು ಸಿ. ಸಾಲ್ಯಾನ್, ಆಂಜನೇಯ ವ್ಯಾಯಾಮ ಶಾಲಾ ಅಧ್ಯಕ್ಷ ವಿನೋದ್ ಸಾಲ್ಯಾನ್, ಉದಯ ಬಿ. ಸುವರ್ಣ, ಶೋಭೇಂದ್ರ ಸಸಿಹಿತ್ಲು, ಸೂರ್ಯ ಕಾಂಚನ್, ಅನಿಲ್ ಕುಂದರ್, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕರ್ಕೇರ, ನಾರಾಯಣ ಕರ್ಕೇರ, ಮನೋಜ್‌ಕುಮಾರ್ ಹಳೆಯಂಗಡಿ, ಹಿಮಕರ್ ಕದಿಕೆ, ಆನಂದ ಸುವರ್ಣ, ಪ್ರವೀಣ್ ತಿಂಗಳಾಯ, ಹರೀಶ್ ಅಗ್ಗಿದಕಳಿಯ, ಜೀವರಕ್ಷಕ ದಳದ ಅನಿಲ್ ಸಾಲ್ಯಾನ್, ಮೂಲ್ಕಿಯ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕಕರ್, ಗ್ರಾಮ ಕರಣಿಕ ಮೋಹನ್, ಸಹಾಯಕ ನವೀನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-16071805

Comments

comments

Comments are closed.