ಐಕಳ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಕಳ, ಉಳೆಪಾಡಿ, ಏಳಿಂಜೆ ಗ್ರಾಮಗಳ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಮಂಗಳವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ರಾಜೀವ ಗಾಂಧಿ ಸಭಾ ಭವನದಲ್ಲಿ ನಡೆಯಿತು.
ಪ್ರತಿ ಗ್ರಾಮ ಸಭೆಗಳಲ್ಲಿ ಇಲಾಖಾಧಿಕಾರಿಗಳು ಗೈರು ಹಾಜಾರಾಗುತ್ತಿದ್ದು ಗ್ರಾಮಸ್ಥರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ ಸೂಕ್ತ ಕ್ರಮ ಜರುಗಿಸಿ ಎಂದು ಐಕಳ ಗ್ರಾಮಸ್ಥರು ಒತ್ತಾಯಿಸಿದರು.
ಐಕಳ ಗ್ರಾಮ ಪಂಚಾಯಿತಿಯಲ್ಲಿ ಕಳೆದ 20 ವರ್ಷಗಳಿಂದ ಕೇವಲ ನಿವೇಶನ ರಹಿತರ ಪಟ್ಟಿ ತಯಾರಾಗಿದ್ದು ಪ್ರತೀ ಗ್ರಾಮ ಸಭೆಯಲ್ಲಿ ಕೇವಲ ಭರವಸೆ ಮಾತ್ರ ದೊರೆಯುತ್ತದೆ. ನಿವೇಶನ ಹಂಚಿಕೆಯಾಗಿಲ್ಲ ಯಾಕೇ? ಎಂಬ ಪ್ರಶ್ನೆಗೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ನಿವೇಶನ ಹಂಚಿಕೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ದಿವಾಕರ ಚೌಟ ತಿಳಿಸಿದರು.
ಮೂರುಕಾವೇರಿ ಮುಲ್ಕಿ ರಾಜ್ಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಹಲವು ತಿಂಗಳಾದರೂ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲದ ಕಾರಣ ಮೂರುಕಾವೇರಿ ಜಂಕ್ಷನ್‌ನಲ್ಲಿ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟುವಿನ ಎತ್ತರ ಪ್ರದೇಶದಿಂದ ಚರಂಡಿ ವ್ಯವಸ್ಥೆ ಇಲ್ಲದ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ಅವೈಜ್ಞಾನಿಕ ರೀತಿಯಲ್ಲಿ ತಾತ್ಕಲಿಕ ತೋಡು ಮಾಡಿ ಚರಂಡಿಗೆ ನೀರು ಬಿಟ್ಟಿದ್ದರೂ ಸಮಸ್ಯೆ ಹಾಗೇಯೇ ಇದೆ ಇದಕ್ಕೆ ಯಾರು ಹೊಣೆ ಎಂದು ಮೂರುಕಾವೇರಿ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಾಗ ಉತ್ತರಿಸಿದ ಪಂಚಾಯಿತಿ ಆಡಳಿತ ಸಂಬಂಧಪಟ್ಟವರಿಗೆ ಹೇಳಿ ಸಮಸ್ಯೆ ಪರಿಹರಿಸಲಾಗುವುದು ಎಂದು ಹೇಳಿದರು.
ಕಿನ್ನಿಗೋಳಿಯಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯುವ ಬಗ್ಗೆ ಏನು ಪ್ರಗತಿ ಕಂಡಿದೆ ಎಂಬ ಪ್ರಶ್ನೆಗೆ ಕಿನ್ನಿಗೋಳಿಯಲ್ಲಿ ಕೇಂದ್ರ ತೆರೆಯುವ ಬಗ್ಗೆ ಸರಕಾರಕ್ಕೆ ಮನವಿ ನೀಡಲಾಗಿದೆ ಶೀಘ್ರ ಕೆಲಸ ಆಗುವ ಬಗ್ಗೆ ಭರವಸೆ ಇದೆ ಪಂಚಾಯಿತಿ ಆಡಳಿತ ಉತ್ತರಿಸಿತು.
ಅರುಣ್‌ಪ್ರಸಾದ್ ರೈ ಪಾನ್‌ಕಾರ್ಡ್ ಬಗ್ಗೆ ಮಾಹಿತಿ ನೀಡಿದರು.
ಉಳೆಪಾಡಿಯಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ನೀರಿನ ಟ್ಯಾಂಕ್‌ನ ಕಂಬಗಳು ಶಿಥಿಲಗೊಂಡಿವೆ ಸರಿಪಡಿಸಿ, ಕುದ್ಕೋರಿ ನೆಲ್ಲಿಗುಡ್ಡೆ ರಸ್ತೆ ರಚನೆ, ರಸ್ತೆ ತ್ಯಾಜ್ಯ ಎಸೆತ, ಬೀದಿ ದೀಪ ಸಮಸ್ಯೆ, ಕಾಂಕ್ರೀಟು ರಸ್ತೆ ರಚನೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಿತು.
ವಲಯ ಅರಣ್ಯಧಿಕಾರಿ ಚಿದಾನಂದ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ದ.ಕ. ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕಾತ್ಯಾಯಿನಿ, ಕಂದಾಯ ಇಲಾಖೆಯ ಮಂಜುನಾಥ, ಕಟೀಲು ಪ್ರಾತಾಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ. ಭಾಸ್ಕರ ಕೋಟ್ಯಾನ್, ಮೆಸ್ಕಾಂ ಇಲಾಖೆಯ ಚಂದ್ರಹಾಸ ಕೃಷಿ ಇಲಾಖೆಯ ಅಬ್ದುಲ್ ಬಷೀರ್ ಮಾಹಿತಿ ನೀಡಿದರು.
ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ ಸಾಲ್ಯಾನ್, ಸದಸ್ಯರಾದ ರವಿಂದ್ರ, ಕಿರಣ್ ಕುಮಾರ್, ದಯಾವತಿ, ರೇಖಾ ಶೆಟ್ಟಿ, ಸಂಜೀವ ಶೆಟ್ಟಿ, ರಾಜೇಶ್ ಶೆಟ್ಟಿ, ಯೋಗೀಶ್ ಕೋಟ್ಯಾನ್, ಸರಿತಾ, ಸುಗುಣ, ಸುಂದರಿ, ಪವಿತ್ರಾ, ಸುಧಾಕರ ಸಾಲ್ಯಾನ್ ಉಪಸ್ಥಿತರಿದ್ದರು. ಪಿಡಿಓ ನಾಗರತ್ನ ಜಿ ಕಾರ್ಯಕ್ರಮ ನಿರೂಪಿಸಿದರು.

Kinnigoli-17071801

Comments

comments

Comments are closed.