ರೆಡ್ ಕ್ರಾಸ್ ಸಂಸ್ಥೆ ವಾರ್ಷಿಕ ಚಟುವಟಿಕೆ ಉದ್ಘಾಟಿನೆ

ಕಿನ್ನಿಗೋಳಿ : ಸೇವೆಯ ಮೂಲಕ ವ್ಯಕ್ತಿ ತನ್ನ ಬದುಕನ್ನು ಸಾರ್ಥಕಗೊಳಿಸಿ ಜನಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆಯಬಹುದು ಎಂದು ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿಯ ವ್ಯವಸ್ಥಾಪಕ ಯಾದವ ದೇವಾಡಿಗ ಹೇಳಿದರು.
ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್ ರೆಡ್ ಕ್ರಾಸ್ ಸಂಸ್ಥೆಗಳ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಗಣ್ಯರು ಕಲಸೆಗೆ ಭತ್ತ ತುಂಬಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ನ್ಯಾಕ್ ಸಂಯೋಜನಾಧಿಕಾರಿ ಪ್ರೊ. ಯೋಗಿಂದ್ರ ಬಿ. ಪ್ರಮಾಣ ವಚನವನ್ನು ಬೋಧಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತಾನ್ ಡಿಸೋಜ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಡಾ ವಿಕ್ಟರ್ ವಾಜ್ ಇ. ಪ್ರಸ್ತಾವನೆಗೈದರು. ಯೂತ್ ರೆಡ್ ಕ್ರಾಸ್‌ನ ಕಾರ್ಯಕ್ರಮಾಧಿಕಾರಿ ಪ್ರೊ. ಸಿಲ್ವಿಯ ಪಾಯ್ಸ್ ವಂದಿಸಿದರು. ಕು. ಪ್ರತೀಕ್ಷ ಕಾರ್ಯಕ್ರಮವನ್ನು ನಿರೂಪಿಸಿದರು.
Kinnigoli-17071801

Comments

comments

Comments are closed.