ಸಸಿಹಿತ್ಲು ನದಿ ಕೊರೆತಕ್ಕೆ 80 ಲಕ್ಷ ರೂ. ತಡೆಗೋಡೆ

ಕಿನ್ನಿಗೋಳಿ: ಸಸಿಹಿತ್ಲು ಮುಂಡಾ ಬೀಚಿನಲ್ಲಿ ಪ್ರಾಕೃತಿಕ ವಿಕೋಪದಿಂದ ಬೀಚ್ ಪ್ರದೇಶದ ಅಳಿವೆಯಲ್ಲಿನ ನದಿ ಕೊರೆತಕ್ಕೆ ತ್ವರಿತವಾಗಿ 160 ಮೀ. ಅಂತರದಲ್ಲಿ 80 ಲಕ್ಷ ರೂ. ವೆಚ್ಚದ ಶಾಶ್ವತ ತಡೆಗೋಡೆಯನ್ನು ನಿರ್ಮಿಸಲಾಗುವುದು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಸೋಮವಾರ ಸಂಜೆ ಸಸಿಹಿತ್ಲು ಬೀಚ್ ಪ್ರದೇಶಕ್ಕೆ ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯ ಪಾವಂಜೆ ಹಾಗೂ ಕದಿಕೆ ನೂತನ ಸೇತುವೆಗಳ ಅಡಿ ಭಾಗದಲ್ಲಿ ಕಾಮಗಾರಿ ಸಂದರ್ಭ ಉಳಿದ ಮಣ್ಣು ಹೂಳೆತ್ತದೆ ಇರುವುದು, ಕಾಂಡ್ಲಾ ಸಸ್ಯಗಳಿಂದ ನದಿಯ ಹರಿಯುವಿಕೆ ತಡೆಯಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಸಮಸ್ಯೆ ಉಂಟಾಗಿದೆ ಮಂಗಳವಾರ ಅಧಿಕಾರಿಗಳಲ್ಲಿ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಮೀನುಗಾರರು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಮಾಗಾರಿ ನಡೆಸಲಾಗುವುದು. ಅಳಿವೆ ಪ್ರದೇಶವು ಸಹ ಉಳಿವಿಗಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸ್ಥಳೀಯರು ಸ್ಥಳೀಯ ಸಮಸ್ಯೆ ಹಾಗೂ ಬೀಚ್ ಅಭಿವೃದ್ಧಿ ಬಗ್ಗೆ ಸಂಸದರು ಮತ್ತು ಶಾಸಕರ ಗಮನಕ್ಕೆ ತಂದರು. ಸ್ಥಳೀಯರೇ ರಚಿಸಿರುವ ಬೀಚ್ ಅಭಿವೃದ್ಧಿ ಸಮಿತಿಯನ್ನು ಅಧಿಕೃತಗೊಳಿಸಲು ಶಾಸಕರ ಮೂಲಕ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಂಸದರು ಉತ್ತರಿಸಿದರು.
ಜಲಸಾರಿಗೆ ಇಲಾಖೆಯ ಇಂಜಿನಿಯರ್ ದಯಾನಂದ, ಪ್ರವೀಣ್ ಕುಮಾರ್, ಮೂಲ್ಕಿಯ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕಕರ್, ಗ್ರಾಮ ಸಹಾಯಕ ನವೀನ್, ದ.ಕ. ಜಿ. ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಶೈಲೇಶ್‌ಕುಮಾರ್, ಸಂತೋಷ್ ಶೆಟ್ಟಿ, ನರೇಂದ್ರ ಪ್ರಭು, ಎಚ್.ರಾಮಚಂದ್ರ ಶೆಣೈ, ವಿಠಲ, ಸತೀಶ್ ಭಟ್ ಕೊಳುವೈಲು, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿನೋದ್‌ಕುಮಾರ್ ಕೊಳುವೈಲು, ಚಿತ್ರಾ ಸುಕೇಶ್, ಅಶೋಕ್ ಬಂಗೇರ, ಸುಖೇಶ್ ಪಾವಂಜೆ, ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಾಸು ಸಿ. ಸಾಲ್ಯಾನ್, ಆಂಜನೇಯ ವ್ಯಾಯಾಮ ಶಾಲಾ ಅಧ್ಯಕ್ಷ ವಿನೋದ್ ಸಾಲ್ಯಾನ್, ಶೋಭೇಂದ್ರ ಸಸಿಹಿತ್ಲು, ಸೂರ್ಯ ಕಾಂಚನ್, ಅನಿಲ್ ಕುಂದರ್, ನಾರಾಯಣ ಕರ್ಕೇರ, ಮನೋಜ್‌ಕುಮಾರ್ ಹಳೆಯಂಗಡಿ, ಹಿಮಕರ್ ಕದಿಕೆ, ಆನಂದ ಸುವರ್ಣ, ಪ್ರವೀಣ್ ತಿಂಗಳಾಯ, ಮಹಾಬಲ ಅಂಚನ್, ಹರೀಶ್ ಅಗ್ಗಿದಕಳಿಯ, ಜೀವರಕ್ಷಕ ದಳದ ಅನಿಲ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17071805 Kinnigoli-17071806

Comments

comments

Comments are closed.