ವಿದ್ಯಾರ್ಥಿ ಶಕ್ತಿಯಲ್ಲಿ ನಾಯಕತ್ವ ಗುಣ ಬೆಳೆಯಲಿ

ಕಿನ್ನಿಗೋಳಿ : ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿಯೇ ನಾಯಕತ್ವ ಗುಣ ಬೆಳೆಯಬೇಕು ಎಂದು ಹಳೆಯಂಗಡಿ ಪಿ.ಸಿ.ಎ ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಹೇಳಿದರು.
ಹಳೆಯಂಗಡಿ ಸಮೀಪದ ಪಡುಪಣಂಬೂರು ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಪಾರ್ಲಿಮೆಂಟಿನ ಮಂತ್ರಿ ಮಂಡಲ ಉದ್ಘಾಟಿಸಿ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕ ಮೈಕಲ್ ಡಿ ಸೋಜ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿ ಪಾರ್ಲಿಮೆಂಟ್‌ನ ಮಂತ್ರಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಎಂ. ನಾರಾಯಣ, ಬೈಕಂಪಾಡಿ ಸರಕಾರಿ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಲಕ್ಷ್ಮಣ್ ಶೆಟ್ಟಿಗಾರ್, ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.
ಮೇಘರಾಜ್ ಸ್ವಾಗತಿಸಿದರು. ಸಪ್ತಮಿ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Kinnigoli-18071802

Comments

comments

Comments are closed.

Read previous post:
Kinnigoli-18071801
ಮಲ್ಲಿಗೆಅಂಗಡಿ ಶ್ರಮದಾನ

ಕಿನ್ನಿಗೋಳಿ:  ಕಟೀಲು - ಮಲ್ಲಿಗೆಅಂಗಡಿ-ಕೊಡೆತ್ತೂರು ಗೆ ಹೋಗುವ ರಸ್ತೆ ಹದಗೆಟ್ಟಿದ್ದು ಭಾನುವಾರ ನಂದಿನಿ ಯುವಕ ಮಂಡಲ ಹಾಗೂ ಸ್ಥಳೀಯ ಮಲ್ಲಿಗೆಯಂಗಡಿ ಕೊಡೆತ್ತೂರು ಯುವಕರು ಸದಸ್ಯರು ಶ್ರಮದಾನದ ಮೂಲಕ ರಸ್ತೆ...

Close