ಜು. 24 : ದಿ ಕೊ ಅ ಉಡುಪ ಸಂಸ್ಮರಣೆ

ಕಿನ್ನಿಗೋಳಿ : ಕಿನ್ನಿಗೋಳಿ ಯುಗಪುರುಷದ ಸಂಸ್ಥಾಪಕ ದಿ. ಕೊ.ಅ. ಉಡುಪ ಸಂಸ್ಮರಣೆ, ನೂತನ ಕೃತಿಗಳ ಬಿಡುಗಡೆ, ವೇದ ವಿದ್ವಾಂಸರ ಸನ್ಮಾನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಸಾಂಸ್ಕ್ರತಿಕ ಸಮಾರಂಭವು ಜುಲ್ಯೆ 24 ರ ಮಂಗಳವಾರ ಸಂಜೆ ಕಿನ್ನಿಗೋಳಿ ಯುಗಪುರುಷದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ವಹಿಸಲಿದ್ದು ಕಟೀಲು ದೇವಳದ ಪ್ರಧಾನ ಅರ್ಚಕ ಕೆ ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಹಿರಿಯ ಸಾಹಿತಿ ಮೊಡಂಕಾಪು ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರಿಗೆ ಕೊ ಅ ಉಡುಪ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ನಂದಳಿಕೆ ಮುದ್ದಣ್ಣ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ನಂದಳಿಕೆ ಬಾಚಂದ್ರ ರಾವ್ ಕೊ ಅ ಉಡುಪರ ಸಂಸ್ಮರಣಾ ಭಾಷಣಗ್ಯೆಯಲಿದ್ದು ಕಮಲಾಕ್ಷಿ ಉಡುಪ ಸ್ಮರಣಾರ್ಥ ವೇದ ವಿದ್ವಾಂಸರ ನೆಲೆಯಲ್ಲಿ ಕವತ್ತಾರು ಶ್ರೀ ಅಬ್ಬಗ ದಾರಗ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಭಟ್ ಅವರನ್ನು ಸನ್ಮಾನಿಸಲಾಗುವುದು. ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಸಾಂತೂರು ಶ್ರೀನಿವಾಸ ತಂತ್ರಿ ರಚಿತ ದೇಗುಲ ದರ್ಶನ ಮತ್ತು ಜ್ಯೋತಿಷಿ ಅನಂತ ಚಿಂತಾಮಣಿ ಬಿಣಗಾ ರಚಿತ ಕಡಲು ನೂತನ ಕೃತಿಗಳ ಬಿಡುಗಡೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಲಿದ್ದಾರೆ.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಶುಭಾಸಂಸನೆಗ್ಯೆಯಲಿದ್ದು ಹಿರಿಯ ಸಾಹಿತಿ ಕೆ ಜಿ ಮಲ್ಯ, ಲೇಖಕರಾದ ಸಾಂತೂರು ಶ್ರೀನಿವಾಸ ತಂತ್ರಿ ಉಜಿರೆ, ಜ್ಯೋತಿಷಿ ಅನಂತ ಚಿಂತಾಮಣಿ ಬಿಣಗಾ ಮತು ಡಾ ನಯನಾಭಿರಾಮ ಉಡುಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ 2 ರಿಂದ 5 ರವರೆಗೆ ಜಿಲ್ಲೆಯ ಖ್ಯಾತ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪಾರಿಜಾತಾಪಹಾರ-ಮ್ಯೆಂದ ದ್ವಿವಿದ ಸಂಜೆ 7 ರಿಂದ ರಾತ್ರಿ 10 ರ ವರೆಗೆ ಕುಶಲವ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಲಿದೆ ಎಂದು ಕಿನ್ನಿಗೋಳಿ ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.