ಹಳೆಯಂಗಡಿ ಗ್ರಾಮ ಸಭೆ

ಕಿನ್ನಿಗೋಳಿ : ಹಳೆಯಂಗಡಿ, ಪಾವಂಜೆ, ಸಸಿಹಿತ್ಲು, ಗ್ರಾಮ ವ್ಯಾಪ್ತಿಯ ಹಳೆಯಂಗಡಿ ಗ್ರಾಮ ಪಂಚಾಯಿತಿಯ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬುಧವಾರ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಅಧ್ಯಕ್ಷತೆಯಲ್ಲಿ ನಡೆಯಿತು.
ಪಾವಂಜೆಯ ಖಾಸಗಿ ವ್ಯಕ್ತಿ ರಸ್ತೆಯಲ್ಲಿ ಸಂಚರಿಸಲು ಅಡ್ಡಿಪಡಿಸುತ್ತಿದ್ದು ಘನ ವಾಹನಗಳು ಅಲ್ಲಿ ಸಂಚರಿಸಲು ಹಣ ಕೇಳುತ್ತ್ತದ್ದು ಇಲ್ಲವಾದಲ್ಲಿ ಗೇಟು ಹಾಕುತ್ತಾರೆ. ನಾವು ಕೂಡಾ ದಾನ ಪತ್ರದ ಮೂಲಕ ರಸ್ತೆಯನ್ನು ಬಿಟ್ಟುಕೊಟ್ಟಿದ್ದೇವೆ ಆದರೂ ಸಮಸ್ಯೆಯಾಗಿದೆ ಪ್ರತೀ ಲಾರಿ ಬರುವಾಗಲೂ ಅವರಿಗೆ ಹಣ ಕೊಡಬೇಕೆಂದರೆ ಹೇಗೆ? ಎಂದು ಗ್ರಾಮಸ್ಥರು ಆಗ್ರಹಿಸಿದಾಗ ತಾ.ಪಂ. ಸದಸ್ಯರು ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆವಾಗ ಸಭೆ ಚರ್ಚೆ ಹಾಗೂ ಗೊಂದಲದಗೂಡಾಯಿತು. ಗ್ರಾ. ಪಂ. ಅಧ್ಯಕ್ಷೆ ಉತ್ತರಿಸಿ ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಸಿಹಿತ್ಲು ಬೀಚ್‌ನ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಅನುದಾನವನ್ನು ಬಳಸಬಾರದು. ಕೇವಲ ಬೀಚ್ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರ ವ್ಯಾಪ್ತಿಯ ಅನುದಾನ ಬಳಸಿದ್ದು ಸರಿಯಲ್ಲ, ಪ್ರವಾಸೋದ್ಯಮ ಇಲಾಖೆಯೇ ಅನುದಾನ ನೀಡಲಿ ಈ ಪ್ರದೇಶ ಕುಡುಕರ ಹಾಗೂ ಡ್ರಗ್ಸ್ ಅಮಲು ವ್ಯಸನಿಗಳ ಅಡ್ಡೆಯಾಗುತ್ತಿದೆ ಪೋಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಸಸಿಹಿತ್ಲು ಗ್ರಾಮಸ್ಥರು ಆಗ್ರಹಿಸಿದರು.
ಪಾವಂಜೆ ಗ್ರಾಮದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ನೀಡಬೇಕು, ಪಂಚಾಯತ್ ಹಣ ಮಾತ್ರ ಸಂಗ್ರಹ ಮಾಡುತ್ತಿದೆ. ಆಯ್ದ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ ಎಂದಾಗ ಉತ್ತರಿಸಿದ ಅಧ್ಯಕ್ಷರು ತ್ಯಾಜ್ಯ ಸಮಸ್ಯೆಗಳು ಎಲ್ಲಾ ಗ್ರಾಮದಲ್ಲೂ ಇದೆ ಆಗಸ್ಟ್ ೧ರಿಂದ ನೂತನ ನಿಯಮಗಳನ್ನು ರೂಪಿಸಸಲಾಗುತ್ತಿದೆ ಎಂದರು.
ಸಸಿಹಿತ್ಲುವಿನಲ್ಲಿ ವಿದ್ಯುತ್ ತಂತಿ ನೇತಾಡುತ್ತಿದೆ, ಅವೈಜ್ಞಾನಿಕ ಖಾಂಡ್ಲ ವನ ನೆಡಲಾಗುತ್ತಿದೆ ಕೃತಕ ನೆರೆ ಸೃಷ್ಠಿ, ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಕಳಪೆ ಕೊಳುವೈಲು ರಸ್ತೆಯ ಕಾಂಕ್ರೀಟ್ ಕಾಮಗಾರಿ, ಗೊಂದಲದ ಭಾಗ್ಯಲಕ್ಷ್ಮೀ ಯೋಜನೆ, ಅಂಗನವಾಡಿ ಕಾರ್ಯಕರ್ತರ ವೇತನ ಹೆಚ್ಚಿಸಿ, ಮತ್ತಿತರ ವಿಷಯಗಳು ಚರ್ಚೆಗೆ ಗ್ರಾಸವಾಯಿತು.
ಅನಿಲ್ ಸಾಲ್ಯಾನ್ ಸಸಿಹಿತ್ಲು, ಎಸ್.ಎಸ್.ಸತೀಶ್ ಭಟ್ ಕೊಳುವೈಲು, ಅದ್ದಿ ಬೊಳ್ಳೂರು, ಶೇಖರ್ ದೇವಾಡಿಗ, ರವಿ ಕೋಟ್ಯಾನ್ ಕೊಳುವೈಲು, ಸುಧಾಕರ ಭಟ್, ಸಾಹುಲ್ ಹಮೀದ್ ಕದಿಕೆ, ಜಯಂತ್ ಭಟ್, ಹಿಮಕರ್ ಕದಿಕೆ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಶಿಕ್ಷಣ ಇಲಾಖೆಯ ಶಖೀಲಾ ನೋಡೆಲ್ ಅಧಿಕಾರಿಯಗಿ ಭಾಗವಹಿಸಿದ್ದರು.
ದ.ಕ. ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಜೀವನ್‌ಪ್ರಕಾಶ್ ಕಾಮೆರೊಟ್ಟು, ಗ್ರಾ. ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಎಚ್.ವಸಂತ ಬೆರ್ನಾಡ್, ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ಚಿತ್ರಾ ಸುರೇಶ್, ಶರ್ಮಿಳಾ ಕೋಟ್ಯಾನ್, ಗುಣವತಿ, ಮಾಲತಿ ಕೊಟ್ಯಾನ್, ಚಂದ್ರಕುಮಾರ್, ಅಬ್ದುಲ್ ಬಶೀರ್, ಹಮೀದ್, ವಿನೋದ್‌ಕುಮಾರ್ ಕೊಳುವೈಲು, ಚಿತ್ರಾ ಸುಖೇಶ್, ಅಶೋಕ್ ಬಂಗೇರ, ಸುಖೇಶ್ ಪಾವಂಜೆ, ಎಚ್.ಹಮೀದ್, ಪ್ರವೀಣ್ ಸಾಲ್ಯಾನ್, ಕೃಷಿ ಇಲಾಖೆಯ ಅಬ್ದುಲ್ ಬಶೀರ್, ಇಂಜಿನಿಯರ್ ಪ್ರಶಾಂತ್ ಆಳ್ವಾ, ಆರೋಗ್ಯ ಇಲಾಖೆಯ ಪ್ರದೀಪ್‌ಕುಮಾರ್, ಶಿಶು ಕಲ್ಯಾಣ ಇಲಾಖೆಯ ಶೀಲಾವತಿ, ಮೆಸ್ಕಾಂನ ಗಜಾನನ, ಸುಭಾಸ್ ಎಂ.ಎಸ್, ಪಶುಸಂಗೋಪನಾ ಇಲಾಖೆಯ ಡಾ.ವಿಶ್ವ ಆರಾಧ್ಯ, ಪೊಲೀಸ್ ಇಲಾಖೆಯ ಶೀತಲ್ ಅಲಗೂರು, ಸಿದ್ದು, ಅರಣ್ಯ ಇಲಾಖೆಯ ರಾಜು ಉಪಸ್ಥಿತರಿದ್ದರು.

Kinnigoli-19071804

Comments

comments

Comments are closed.