ಕಲಿತ ಶಾಲೆಯನ್ನು ಬೆಳೆಸಬೇಕು

ಕಿನ್ನಿಗೋಳಿ : ಕಲಿತ ಶಾಲೆಯ ಉನ್ನತಿಗೆ ತಮ್ಮಿಂದಾದ ಕೊಡುಗೆಯನ್ನು ನೀಡುವ ಮೂಲಕ ಹಳೆ ವಿದ್ಯಾರ್ಥಿಗಳು ಸಾರ್ಥಕ್ಯವನ್ನು ಕಾಣಬಹುದು ಎಂದು ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಕಟೀಲು ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಅಕ್ಷರಾನ್ನಂ ಕಟ್ಟಡಕ್ಕೆ ದುಬೈನ ಕಟೀಲ್ ಫ್ರೆಂಡ್ಸ್ ಕ್ರಿಕೆಟ್ ಟೀಮ್ ವತಿಯಿಂದ ಹಾಗೂ ಶಾಲೆಯ ಹಳೆವಿದ್ಯಾರ್ಥಿಗಳ ವತಿಯಿಂದ ನೀಡಿದ ದೇಣಿಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
1995ನೇ ಬ್ಯಾಚಿನ ವಿದ್ಯಾರ್ಥಿಗಳ ತಂಡದ ವತಿಯಿಂದ ಶಾಲೆಗೆ ಲ್ಯಾಪ್‌ಟಾಪ್, ಕ್ರೀಡಾ ಉಪಕರಣಗಳು, ವಿದ್ಯಾರ್ಥಿಗಳ ಶಾಲಾ ಶುಲ್ಕ, ಪ್ರತಿಭಾವಂತರಿಗೆ ಸಮವಸ್ತ್ರ ವಿತರಿಸಲಾಯಿತು.
ಹಳೆ ವಿದ್ಯಾರ್ಥಿಗಳಾದ ಕಿಶೋರ್ ಶೆಟ್ಟಿ ಮಾಂಜ, ಪ್ರಶಾಂತ ಮಾಡ ಕಿಲೆಂಜೂರು, ರಾಜಶೇಖರ ಎಕ್ಕಾರು, ರಾಘವೇಂದ್ರ ನಾಯಕ್ ಎಕ್ಕಾರು, ಗಿರೀಶ್, ಸುದೀಪ್ ಶಿಬರೂರು, ಹಳೆವಿದ್ಯಾರ್ಥಿ ಸಂಘದ ಕಾರ‍್ಯದರ್ಶಿ ಮಿಥುನ ಕೊಡೆತ್ತೂರು ಮತ್ತಿತರರಿದ್ದರು. ಉಪಪ್ರಾಚಾರ್ಯ ಸೋಮಪ್ಪ ಅಲಂಗಾರು ಸ್ವಾಗತಿಸಿದರು. ಹಿರಿಯ ಶಿಕ್ಷಕ ಸಾಯಿನಾಥ ಶೆಟ್ಟಿ ವಂದಿಸಿದರು. ಸಹಶಿಕ್ಷಕ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-19071803

Comments

comments

Comments are closed.

Read previous post:
Kinnigoli-19071802
ಡಾ. ಎಸ್.ಪದ್ಮನಾಭ ಭಟ್ – ಪ್ರಬಂಧ ಮಂಡನೆ

ಕಿನ್ನಿಗೋಳಿ : ಉಪನ್ಯಾಸಕ ಡಾ. ಎಸ್.ಪದ್ಮನಾಭ ಭಟ್ ಎಕ್ಕಾರು ಇದೇ ಬರುವ ಜುಲೈ ತಿಂಗಳ 21ರಿಂದ 25ರವರೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ 25ನೇ ವಿಶ್ವ ರಾಜ್ಯಶಾಸ್ತ್ರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆ...

Close