ತುಳು ನಾಟಕ ತರಬೇತಿ ಚಾಲನೆ

ಕಿನ್ನಿಗೋಳಿ : ಕಲಾವಿದರು ಕಲಾಭಿಮಾನಿಗಳ ಅಭಿರುಚಿಗೆ ತಕ್ಕಂತೆ ನಾಟಕ ಪ್ರದರ್ಶಿಸದೆ ಕಲೆಯ ಮಟ್ಟವನ್ನು ಉಳಿಸುವಂತಃ ಪ್ರದರ್ಶನಗಳನ್ನು ನೀಡಿದಾಗ ರಂಗಭೂಮಿ ಉಳಿಯಲು ಸಾಧ್ಯ ಎಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ಅವರು ವಿಂಶತಿ ವರ್ಷಾರಣೆಯಲ್ಲಿರುವ ಕಿನ್ನಿಗೋಳಿಯ ವಿಜಯಾ ಕಲಾವಿದರ ಹರೀಶ್ ಪಡುಬಿದ್ರಿಯವರ ರಚನೆಯ ಕಂಡೊಡೊರಿ ದಂಡ್‌ಡೊರಿ ತುಳು ನಾಟಕದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಈ ನಾಟಕದಲ್ಲಿ ದೇಶದ ಗಡಿ ಕಾಯುವ ಸೈನಿಕ ಹಾಗೂ ಜನರು ಉಣ್ಣುವ ಅನ್ನದ ಉತ್ಪಾದನೆಯ ಕಾಯಕ ನಡೆಸುವ ಕೃಷಿಕನ ಬದುಕಿನ ಬಗ್ಗೆ ಸಂದೇಶವಿರುವುದರಿಂದ ನಿವೃತ್ತ ಯೋಧ ಗಣೇಶ್ ಕಾರ್ಣಿಕ್ ಮತ್ತು ಪ್ರಗತಿಪರ ಕೃಷಿಕ ಕೊಡೆತ್ತೂರು ಜಯಂತ ಕರ್ಕೇರಾರ ಮೂಲಕ ತರಬೇತಿಗೆ ಚಾಲನೆ ನೀಡಲಾಯಿತು ಎಂದು ವಿಜಯಾ ಕಲಾವಿದರ ಗೌರವಾಧ್ಯಕ್ಷ ಕೊಡೆತ್ತೂರು ಭುವನಾಭಿರಾಮ ಉಡುಪ ತಿಳಿಸಿದರು.
ಕಲಾ ಪೋಷಕರಾದ ಪ್ರಥ್ವೀರಾಜ್ ಆಚಾರ್ಯ, ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ, ತಂಡದ ಸಂಚಾಲಕ ಮುಂಡ್ಕೂರು ಸಾಯಿನಾಥ ಶೆಟ್ಟಿ, ಕಾರ್ಯದರ್ಶಿ ಲಕ್ಷ್ಮಣ್ ಬಿ.ಬಿ, ನಿರ್ವಾಹಕ ಸುಧಾಕರ ಸಾಲ್ಯಾನ್, ರಂಗ ನಟ ರಾಜೇಶ್ ಕೆಂಚನಕೆರೆ, ನಾಟಕ ರಚನೆಕಾರ ಹರೀಶ್ ಪಡುಬಿದ್ರಿ ಮತ್ತು ತಂಡದ ಸರ್ವ ಕಲಾವಿದರು ಉಪಸ್ಥಿತರಿದ್ದರು.
ಆಧ್ಯಕ್ಷ ಶರತ್ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಈ ಹಿಂದಿನ ಬರಾಸ್ ಭಾಸ್ಕರೆ, ಲೆಕ್ಕ ತತ್ತಿ ಬೊಕ್ಕ, ತೂಪಿನಾರೇ ಆಪಿನಾರ್ ಹಾಗೂ ಬಿಲೆ ಕಟ್ಟರೆ ಆವಂದಿನ ತುಳು ನಾಟಕಗಳು ಕಲಾವಿದರ ಪರಿಶ್ರಮ, ಕಲಾಭಿಮಾನಿಗಳು ಹಾಗೂ ಕಲಾ ಪೋಷಕರ ಪ್ರೋತ್ಸಾಹದಿಂದ ಆದ್ಬುತ ಯಶಸ್ಸು ಕಂಡಿವೆ. ನಾಟಕದಲ್ಲಿ ಮಾರ್ಮಿಕ ಸಂದೇಶಗಳ ಜತೆ ಹಾಸ್ಯಭರಿತ ದೃಶ್ಯಗಳನ್ನು ಜೋಡಿಸಲಾಗಿದ್ದು ಉತ್ತಮ ನಾಟಕ ನೀಡುವ ಉದ್ದೇಶ ಹೊಂದಲಾಗಿದೆ..ಹರೀಶ್ ಪಡುಬಿದ್ರಿ, ನಾಟಕದ ಲೇಖಕ
*ವಿಜಯಾ ಕಲಾವಿದರ ವಿಂಶತಿ ವರ್ಷಾಚರಣೆ ನವಂಬರ್ ಕೊನೆಯ ವಾರದಲ್ಲಿ ಯುಗಪರುಷದಲ್ಲಿ ನಡೆಯಲಿದೆ. ಆ ಸಂದರ್ಭ ಐತಾರೊಡ್ದ್ ಐತಾರೋ ಎಂಬ ವಿಶೇಷ ಕಾರ್ಯಕ್ರಮದಲ್ಲಿ ವಿಜಯಾ ಕಲಾವಿದರ ಎಂಟು ಜನಪ್ರಿಯ ತುಳು ನಾಟಕಗಳು ಪ್ರದರ್ಶನಗೊಳ್ಳಲಿದೆ…ಸಾಯಿನಾಥ ಶೆಟ್ಟಿ ಮುಂಡ್ಕೂರು, ತಂಡದ ಸಂಚಾಲಕ
ನೂತನ ನಾಟಕ ಕಂಡೊಡೊರಿ ದಂಡ್‌ಡೊರಿ ಸೆಪ್ಟಂಬರ್‌ನಲ್ಲಿ ಗಣೇಶ ಚತುರ್ಥಿಯ ಸಂದರ್ಭ ಮೊದಲ ಪ್ರದರ್ಶನ ಕಾಣಲಿದೆ. ತಂಡದ ಸತತ 13ನೇ ವರ್ಷದ ಮುಂಬ ಪ್ರವಾಸ ಜನವರಿ ತಿಂಗಳಲ್ಲಿ ನಡೆಯಲಿದೆ.

Kinnigoli-19071805

Comments

comments

Comments are closed.